Saturday, September 8, 2012

ಕೈ ಹಿಡಿದವಳು...


ಅವಳಿಗಾಗಿ ನಾನು ಕಾದು ಕುಳಿತಿದ್ದೆ. ಅದು ಮಳೆಗಾಲದ ದಿನಗಳು... ಅವಳು, ಇಂದು ಭೇಟಿ ಆಗುತ್ತೇನೆ ಎಂದು ಕರೆ ಮಾಡಿ ಹೇಳಿದಳು.. ಸೂರ್ಯ ತನ ದಿನ ನಿತ್ಯದ ಕೆಲಸ ಮುಗಿಸಿ ಉಷೆಗೆ ಕೆಂಪು ಪೌಡರ್ ಹಚ್ಚಿ ಬೆಳಕಿನ ರಂಗಿನಾಟ ಮುಗಿಸಿ ಮೆಲ್ಲಮೆಲ್ಲಗೆ ದೂರ ದಿಗಂತದಿ ಜಾರಿಕೊಂಡ...ಬಹು ದೂರದಲ್ಲಿ ಕಪ್ಪು ಮೋಡಗಳು ಮಳೆ ಹನಿಗಳ ತುಂಬಿಕೊಂಡು, ಗರ್ಭಿಣಿಯಂತೆ ಹೆಜ್ಜೆ ಇಡುತ್ತ, ಮುಗಿಲ ಸರೋವರದಿ ಒಮ್ಮೆಗೆ ಧಾವಿಸಿದವು. ಬೀಸುತಿದ್ದ ಗಾಳಿಯ ರಭಸಕ್ಕೆ ಅಲ್ಲೊಂದು ಇಲ್ಲೊಂದು ಪುಟ್ಟ ಹಕ್ಕಿಗಳು ತಮ್ಮ ಗೂಡು ಸೇರಿಕೊಳ್ಳಲಾರಂಭಿಸಿದವು .ದಿಟ್ಟ ಕಾಗೆಯೊಂದು ಗಾಳಿಯ ರಭಸದೆಡೆಗೆ ಸೂತ್ರ ಮುರಿದ ಗಾಳಿಪಟದ ಹಾಗೆ ಅತ್ತಿತ್ತ ತೇಲುತ್ತ ಮುಂದೆ ಹಾರಿತು … ಎಷ್ಟು ಸಮಯವಾದರೂ ಅವಳ ಸುಳಿವು ಇರಲಿಲ್ಲ, ಬೀದಿಯ ಕಡೆ ನೋಡಿದರೂ ಅವಳು ಬರುವ ಮುನ್ಸೂಚನೆ ಇರಲಿಲ್ಲ. ತಕ್ಷಣಕ್ಕೆ ಗುಡುಗಿನ ಶಬ್ದ ಕೇಳಿ ಬಂತು. ತಲೆಯೆತ್ತಿ ಮೇಲೆ ನೋಡಿದೆ. ಮೋಡಗಳ ಗರ್ಭದಿಂದ ಭಾವದ್ಗೊನನವಾದ ಮೊದಲ ಮಳೆ ಹನಿ ನನ್ನ ಕಣ್ಣ ರೆಪ್ಪೆ ಮೇಲೆ ಬಂದು ತಾಕಿತು. ಪುಟ್ಟ ಮಗುವಿನ ಹಾಗೆ ಕಣ್ಣ ಉಜ್ಜಿಕೊಂಡು ತಲೆ ಎತ್ತಿದೆ, ಇದಕ್ಕಿದ್ದ ಹಾಗೆ ಅಸಂಖ್ಯಾತ , ಕೋಟಿ ಕೋಟಿ ಮಳೆ ಹನಿಗಳ ರಾಶಿ ಒಮ್ಮೆಗೆ ಭೂಮಿಯೆಡೆಗೆ ಧಾವಿಸಿದವು, ಚಿಟರ್ ಪಟರ್ ಎಂದು ಸದ್ದು ಮಾಡುತ್ತ ವಾತಾವರಣದಿ ತುಂಬಿದ ಮೌನವ ಮುರಿದವು. ಎಲೋ ಅಡಗಿ ಕುಳಿತ್ತಿದ ಕಪ್ಪೆ ಮರಿಗಳ ಸೈನ್ಯ ಮಳೆ ಹನಿಗಳ ರಾಶಿ ಅಪ್ಪಳಿಸುತ್ತಿದ ಹಾಗೆ ಕುಪ್ಪಳಿಸುತ್ತ ಬರ ತೊಡಗಿದವು. ಮನಸಲ್ಲಿ ಅದೇನೋ ಒಂದು ಕಂಪನ, ಮತ್ತೆ ತಲೆ ಎತ್ತಿ ನೋಡಿದೆ, ಹಕ್ಕಿಯ ಪುಕ್ಕ ಗಾಳಿಯಲಿ ತೇಲಿ ಬರುವ ಹಾಗೆ ನನ್ನವಳು, ನೆಲ ಎಲ್ಲಿ ಸವಿದಿತ್ತು ಎನ್ನುವ ಹಾಗೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ, ಒದ್ದೆ ಮುದ್ದೆಯಾಗಿ ಯಾವುದೊ ಹಳೆ ಕಾಲದ ಛತ್ರಿ ಹಿಡಿದುಕೊಂಡು ನನ್ನೆಡೆಗೆ ಬರುತಿದಳು… ನನ್ನ ಮುಖ ನೋಡಿ ನಸು ನಕ್ಕು ತಲೆ ಬಾಗಿಸಿ ಅಪ್ಪಿಕೊಳ್ಳುವ ನೆಪದಲ್ಲಿ ಎಡವಿ ನನ್ನೆದೆಯ 30-40 ಸೈಟ್ ಮೇಲೆ ಬಿದ್ದು ಅಪ್ಪಿಕೊಂಡು ನಿಂತಳು...
ನಮ್ಮಿಬರ ನಡುವೆ ಬರಿ ಮೌನವೇ ಇತ್ತು, ಸುತ್ತಲೂ ಮಳೆ ಹನಿಯ ಶಬ್ದ, ಲೈಟ್ ಕಂಬದ ಲೈಟ್, ಮಿಂಚು ಹುಳುವಿನ ಹಾಗೆ ಮಿಣುಕಿ ಮಿಣುಕಿ ನಮ್ಮನು ಇಣುಕಿ ನೋಡುತ್ತಿದ್ದ ಅನುಭವ. ನನ್ನೆದೆಯ ಉಸಿರಾಟ ಅವಳ ಎದೆಯ ಬಡಿತ ಇವೆರಡರ ಮಿಲನದಿಂದ ನವಿರಾಗಿ, ಸ್ಪರ್ಶದಿ ಮೌನ ಜಾರಿ ನಾಚಿಕೆಯಲ್ಲಿ ತೊಯ್ದು, ಹೂವಿನ ಸ್ಪರ್ಶದಂತೆ ಇದ್ದ ಅವಳ ಮೊಗವ ಹಿಡಿದು ಮೇಲಕ್ಕೆತ್ತಿದೆ. “ ಏನಾಯ್ತು ತುಂಟಿಗೆ.ಯಾಕ್ ಹಿಂಗ್ ನಾಚ್ಕೊಂಡಿದೆ” ಎಂದೊಡನೆ ಮತ್ತೆ ನಸು ನಕ್ಕು ಚಳಿಯಿಂದ ನಡುಗುತ ಬಿಗಿದಪ್ಪಿದಳು… ತುಂಟು ತನದ ಹಲವು ಯೋಚನೆಗಳು ನನ್ನೊಳಗೆ ಸೈಕಲ್ ಹೊಡೆಯುತ್ತಿದ್ದ ಅನುಭವಗಳಿಗೆ ಏನೆಂದು ಹೇಳಲಿ… ಪುನಃ ಅವಳ ಗಲ್ಲ ಹಿಡಿದು ಎತ್ತಿದೆ, ಮಳೆ ಹನಿಯ ಒಂದು ತುಣುಕು ಅವಳ ತುಟಿಯ ಮೇಲೆ ಸ್ಥಾನ ಪಡೆದಿತ್ತು. ಆ ಹನಿಯನ್ನು ವಶಪಡಿಸಿಕೊಳ್ಳಬೇಕು ಎಂಬ ತುಂಟು ನೆವದಲ್ಲಿ ಅವಳ ಹತ್ತಿರ ಸರಿದೆ. ಏನೂ ಅರಿಯದೆ ಮುಗ್ದಳಂತೆ ಕಣ್ಣು ಮುಚ್ಚಿ ಹಿಡಿದ ಹಿಡಿತ ಬಿಗಿಯಾಗಿ ಹಿಡಿದು ಪ್ರಪಂಚ ಮರೆತವಳಂತೆ ನಿಂತಳು. ಆ ಹನಿಯನ್ನು ನನ್ನ ವಶ ಮಾಡಿಕೊಳ್ಳುವ ಹಠದಲ್ಲಿ ಮುಂದೆ ನಡೆದೆ. ಇದಕ್ಕಿದ ಹಾಗೆ ಒಮ್ಮೆಗೆ ಜೋರಾಗಿ ಗುಡುಗಿತು. ಅವಳು ಕಣ್ಣು ಬಿಟ್ಟಳು ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ ಮತ್ತೆ ನಕ್ಕೆವು.. ಮತ್ತೆ ಮೌನ ಅವಳ ಕಣ್ಣಂಚಿನಲ್ಲಿ ನನ್ನ ಪ್ರತಿಬಿಂಬ. ನನ್ನ ಎದೆಯ ಕತ್ತಲಲ್ಲಿ ಫ್ಯುಜ್ ಹೋಗಿ ಮತ್ತೆ ಅಂಟಿಕೊಂಡ ಬಲ್ಬ್ ಹಾಗೆ ಒಂದು ಬೆಳಕು.. ಮಳೆ ಹನಿಯ ವಶ ಪಡಿಸಿಕೊಳಬೇಕು ಎಂಬ ಮರು ಪ್ರಯತ್ನದಲ್ಲಿ ಅವಳ ಹತ್ತಿರ ಹೋದೆ, ಇಬ್ಬರೂ ಕಣ್ಣ ಮುಚ್ಚಿದೆವು, ನನ್ನ ಬುಜದ ಮೇಲೆ ಯಾರೋ ಕೈ ಇಟ್ಟ ಹಾಗೆ ಭಾಸವಾಗಿತ್ತು, ನನ್ನ ಗೆಳೆಯ ರಾಮು ಪಕ್ಕದಲ್ಲೇ ಇದ್ದ .. “ ಯಾಕೋ ಮಗ ಏನ್ ಆಯ್ತು, ಅವಳ ನೆನಪಾಯ್ತ? ಯಾಕೆ ಹಿಂಗೆ ಮೌನವಾಗಿ ಎದ್ದು ನಿಂತೆ? "ಎಂದು ಪ್ರಶ್ನೆ ಹಾಕಿದ… ಇಷ್ಟು ಹೊತ್ತು ನೆನೆದದ್ದೆಲ್ಲ ಅವಳ ನೆನಪು ಎಂದು ಅರಿವಿಗೆ ಮೂಡಿ ಬಂತು. ಅವಳು ಪ್ರತಿ ಕ್ಷಣ ನನ್ನ ಜೊತೆ ಇರುವ ಹಾಗೆ ಒಂದು ಅನುಭವ. ನಾ ಒಂಟಿ ಆಗಿದ್ದು ಬರಿ ಹೊರಗಿನ ಪ್ರಪಂಚಕ್ಕೆ, ನನ್ನ ನಗು ಮೂಢ ಜನಗಳ ನಡುವೆ ಮಾತ್ರ.. ನನ್ನ ಒಳಗಿನ ಪ್ರಪಂಚದಲ್ಲಿ ಅವಳು ಸದಾ ನನ್ನವಳು, ಅವಳು ಎಂದಿಗೂ ನನ್ನಿಂದ ದೂರವಾಗಿರಲಿಲ್ಲ. ಅವಳ ದೇಹ ಮಾತ್ರ ನನ್ನಿಂದ ಅಗಲಿ ಎರಡು ವರ್ಷವಾದರೂ, ಅವಳ ಆತ್ಮ ನನ್ನ ಜೊತೆ ಬೆಸೆದುಕೊಂಡಿದೆ… ಕೆಲವು ಕಣ್ಣೀರಿನ ಹನಿಗಳನ್ನು ಹೊರ ಚಿಮ್ಮಿ, ಗಾಳಿಯಲಿ ಅವಳ ಕೈ ಹಿಡಿದು ಮನೆಯ ಕಡೆಗೆ ನಡೆದೆ……

ಇಂತಿ ನೆನಪುಗಳ ಮರೆಯಲ್ಲಿ,

ನಾನ್ಯಾರೋ..

Friday, August 31, 2012

Life reason



When i started growing in to my teenage i wondered what life is about?? till den i graduated from the hell of studies, exams and everything seemed like a bowl of Hippocrates living their lives in the same old world where nothing exists, nothing exists where they still smile around and searching there happiness through the corridors of living relationship and often failed to realize that god has created happiness in every corner and every thing , i mean in every "Things", where we often fail to realize and analyse what's it about. There were the days when I used to wake up in middle of the night wondering where I would  land up , is there a definite destination, why do people often find mistake's in one's life, why is it about only the earning and living, why isn't the life apart from it, why the hell people adopt things which are end to the line, which they cannot reach. When wind passes by it plays a melody of joy where i realize life is less and less to live, days and years just passes by where memories remember the hunger in me driven me through the world of craziness, i had discovered the happiness when i had ran away from home when i was a kid, wandering and wondering in the streets, with not less than a penny in my pocket. Life taught me to live in the hunger , fight with the emotions which break me in to the pieces and turn me in to a paper which flies in the storm , i knew i ain't been to the stage where i could think so much, little smile on the face scratching my head and tumbling the day again with hell lot of confusions. We are often forced to live with reflections of past, and live every day like a passing cloud. When you decide to be crazy, you drown in the thoughts beveling that life needs more space, space where complete freedom like nature, remaining in the silence of beauty and in the hands of branches, hanging around with couple of astonishing realities.

 I had often heard that Core of man comes from new experiences, so Life is about living yourself and living your dreams. World is wild and deep; Explore and hunt it down, live through the confusions and new explorations in reality and with definite certainty. Silence and words are the two faces of a same coin, when life push you into the silence, words grab you down and pull you down into the thoughts and imaginations, where you live among the words, among the dreams, among the world, where nothing exists for a while. Money, lives of people, culture,career, seems like a world of imaginations when you break through the barriers of living your life into the freedom, which you desire. Standing no where, walking out to unknown destination, hilltops, river , mountains , nature , birds, animals , blue sky, all these live their life just wild , so wild that man kingdom would wonder how they lived in the pre-historic stages of lives. You just stand out there , out on the edge of the world, edge of the world where every thing looks tiny every thing looks wonder, where birds fly with freedom, where rivers flow with joy , where clouds meet up the mountains and this is where you wanna live and this is where you find your eternity and happiness is found when you breathe your last breathe forever, with a joy filled in it...... and that would be the day i would be me and me living with a complete freedom. That's when you silence breaks, breaking through narrow steeps of life, breaking through the waves of emotions, breaking through the valleys of disappearance, breaking through the contaminated life cycle, breaking through the convinces and  finally fearing to what we are shouting at...




Friday, April 27, 2012

ತೇಜಸ್ವಿ ಎಲ್ಲರಂತೆ ಬದುಕಿದ ಸಾಮಾನ್ಯ ಮನುಷ್ಯ

ಕಳೆದ ವಾರ ಬೆಂಗಳುರಿಂದ ಬೆಳ್ತಂಗಡಿ ಪಯಣ ಹೊರಟಿತ್ತು, ಮುಂಜಾನೆ 4.30 ಸಮಯ ಕೊಟ್ಟಿಗೆಹಾರ ಬಸ್ ಸ್ಟಾಪ್ ಅಲ್ಲಿ ಕಾರ್ ನಿಲ್ಲಿಸಿ ಬಸ್ ಸ್ಟಾಪ್ ಎದ್ದುರು ಇದ್ದ ಒಂದು ಟೀ ಅಂಗಡಿಯಲ್ಲಿ ಕಾಫಿ ಹಿಗುತ್ತ ನೀರು ದೋಸೆ ತಿನ್ನುತ್ತ ನಿಂತ್ತೆವು.. ಕೊಟ್ಟಿಗೆಹರದಲ್ಲಿರುವ ತೇಜಸ್ವಿ ಸಂಶೋಧನಾ ಕೇಂದ್ರ ಒಮ್ಮೆ ನೆನಪಿಗೆ ಬಂತ್ತು, ಈ ಕುರಿತ್ತು ಅಂಗಡಿ ಅವರ ಬಳಿ ಮಾತನಾಡುತ್ತಿದೆ ಇದಕ್ಕಿದ ಹಾಗೆ ಅವ 
"ಅಯ್ಯೋ ಬಿಡಿ ಸರ್, ತೇಜಸ್ವಿ ಅವರು ಏನ್ ಮಾಡಿದ್ರು?? ಅಂತ ಮಹಾನ್ ಕೆಲಸ ಅದ್ರು ಏನ್ ಮಾಡಿದ್ರು.. ನಮ್ಮಂತೋರಿಗೆ ಉಪಯೋಗ ಅಗ್ಲಿಕಿಲ್ಲ , ಅವರು ಊರಿಗೆ ಅಂತ ಏನು ಮಾಡಲಿಲ್ಲ " ಎಂದು ತೇಜಸ್ವಿ ಅವರ ಬಗ್ಗೆ ಸ್ವಾರ್ಥದ ನುಡಿ ನುಡಿದ..

ನಿಂತಲ್ಲೇ ದಿಗ್ಭ್ರಮೆಯಾಯಿತು ಜೊತೆಯಲ್ಲಿದ ನನ್ನ ಗೆಳೆಯ ವಿನೋದ್ ಸ್ವಲ್ಪ ಕೋಪ ಬಂದು " ಅಲ್ಲ ಸ್ವಾಮಿ, ತೇಜಸ್ವಿ ನಿಮಗೆ ಏನ್ ಮಾಡಬೇಕಿತ್ತು, ಅವರ ಬೂಕ್ಸ್ ಇಂದ ಎಷ್ಟೋ ಜನರಿಗೆ Inspiration ಆಯ್ತು ಎಲ್ಲರ ಹಾಗೆ ಸಾಮಾನ್ಯವಾಗಿ ಬದುಕಿ ಹೋದರು " ಎಂದು ಹೇಳಿದ...

ಅದಕ್ಕೆ ಅಂಗಡಿ ಅವ " ಪುಸ್ತಕ ಅದು ಇದು ಎಲ್ಲ ನಿಮ್ಮಂತೋರಿಗೆ ಸರಿ ನಮ್ಮಿಗ್ ಏನ್ ಉಪಯೋಗ ಆಯ್ತು" ಎಂದು ಮತ್ತೆ ತಾರಕ ಮಾಡಿದ್ದ

ವಿನೋದ್ ಕರೆದುಕೊಂಡು ಅಲ್ಲಿಂದ ಬಂದ ಕೆಲೆಸ ಹಿಡಿದು ಹೊರೆಟೆವು.. ತೇಜಸ್ವಿ ಅಂತಹ ಮಹಾನ್ ಶಕ್ತಿಯ ಬಗ್ಗೆ ಅರಿವು ಮೂಡಿಸುವ ಸಮಯವಾಗಲಿ ಯೋಚನೆ ಅಗಲಿ ಮಾಡುವ ಪ್ರಯತ್ನ ಮಾಡಲಿಲ್ಲ... ತೇಜಸ್ವಿ ಎಲ್ಲರಂತೆ ಬದುಕಿದ ಮನುಷ್ಯ ಜೀವಿ , ಮೂಡಿಗೆರೆಯ ಯಾವುದೊ ಒಂದು ಪುಟ್ಟ ಜಾಗದಲ್ಲಿ ತೋಟಗಾರಿಕೆ ಮಾಡಿಕೊಂಡು ತಮ್ಮ ಸುತ್ತಲಿನ ಜೀವ ಸಂಕುಲಗಳ ಬಗ್ಗೆ ಯೋಚಿಸುತ್ತ, ಅಲ್ಲಿ ಅವರು ಕಂಡ ಪುಟ್ಟ ಪ್ರಪಂಚದ ಜೊತೆ ಬೇರೆತ್ತು ಅರಿತ್ತ ಅನುಭವಗಳನು ಅಲಿಂದಲೇ ಬರಹದ ಮೂಲಕ ಪ್ರಪಂಚಕೆ ಸಮರ್ಪಿಸಿದರು.. ಕೆಲವರು ಇದನು inspiration ಆಗಿ ಕಂಡುಕೊಂಡರು, ಇನ್ನು ಕೆಲವರು ಇವರು ಮಹಾನ್ ವ್ಯಕ್ತಿ ಎಂದು ಕರೆದರೂ.. ಅವರವರ ಅನುಕೂಲಕ್ಕೆ , ಅವಾಂತರಕ್ಕೆ ತಕ್ಕ ಹಾಗೆ ಕರೆಯಲು ಪ್ರಾರಂಭಿಸಿದರು...

ಇದೆಲ್ಲ ವಿಚಾರಗಳು ಏನೇ ಇರಲ್ಲಿ ತೇಜಸ್ವಿ ಅವರು ದುಡ್ಡಿನ ಹಿಂದೆ ಹೋದವರಂತು ಅಲ್ಲ , ಯಾವ ಮಂತ್ರಿ ಪದವಿ ಅಥವಾ ಪಕ್ಷಗಳ ಕಟ್ಟಿದವರು ಅಲ್ಲ.. DVG ಅವರ "ಎಲ್ಲರೊಳಗೊಂದಾಗು ಮಂಕುತಿಮ್ಮ" ಎಂದು ತಮ್ಮ ಸುತ್ತ ಮುತ್ತಲಿನ ಪರಿಸರದ ಜೊತೆ ಬೇರೆತ್ತು ಅರಿತ್ತು ಬದುಕಿದವರು ಎಂಬ ವಿಚಾರ ತೇಜಸ್ವಿ ಸುತ್ತ ಬದುಕಿದ ವ್ಯಕ್ತಿಗಳಿಗೆ ಅದ್ಯಕ್ಕೆ ತಿಳಿಯಲಿಲ್ಲ?? .. ಇಂತಹ  ಮನುಷ್ಯ ಅಂಗಡಿ ಅವರಿಗೆ ಅಥವಾ ಊರಿನ ಯಾವುದೇ ಜನರಿಗಾಗಲೀ ಏನು ಮಾಡಬೇಕಿತ್ತು, ಅಂಗಡಿ ಅವನದು ಮೂರ್ಖ ಪ್ರಶ್ನೆಯೇ ಅಥವಾ ಸ್ವಾಭಾವಿಕ ಮನುಷ್ಯರ ಗುಣವೋ ಅರಿಯಲಿಲ್ಲ, ತೇಜಸ್ವಿ ಸುತ್ತ ಇಂತಹ ಅನೇಕರು ಇದರು ಇವುಗಳ ಕುರಿತ್ತು ಯಾವುದನು ತಲೆ ಕೆಡಿಸಿಕೊಲ್ಲದೆ ಅವರ ಜೊತೆ ಬೆರೆತು ಪ್ರಪಂಚ ನೋಡಿದವರು ಅವರು, ತೇಜಸ್ವಿ ಒಂದು ಮಹಾನ್ ತೆಜಸು "ಹಿತ್ತಲ ಗಿಡ ಮದ್ದಲ್ಲ" ಎಂಬ ಮಾತು ಅಲ್ಲಿನ ಅನೇಕ ಜನರಿಗೆ ತಿಳಿದ ಹಾಗೆ ಇರಲಿಲ್ಲ.. :) 

Thursday, March 29, 2012

ಒಂದು ರುಪಾಯಿ ಚಿಲ್ರೆ ತಗೋಬೇಕ???

       

"ನನಗು ನಿನಗು ಕಣ್ಣಲ್ಲೆ ಪರಿಚಯ, ಸನಿಹ ಸುಳಿವ ಮನದಾಸೆ ಅತಿಶಯ, ಏನೋ ಆಗಿದೆ ನನಗಂತು ಸಂಶಯ" ಅರಮನೆ ಚಿತ್ರದ ಈ song ಅಲ್ಲಿ ಹೀರೋ ಜಾಗದಲಿ ನಾನಿದೆ, ಇನ್ ಏನು ನಟಿ ರೋಮ ಅವರಿಗೆ ಇ ಲವ್    ಯು ಚಿನ್ನ ಎಂದು ಹೇಳಬೇಕು!! ಅದೇ ಸಮಯಕ್ಕೆ ಸರಿಯಾಗಿ ಅಲಾರಾಂ ಕಿರುಚತೊಡಗಿತು. ಸಮಯ ಆಗಲೇ ಮುಂಜಾನೆ 4.30 !! ಮೈಸೂರಿಗೆ ಯಾವುದೊ ಕೆಲಸದ ವಿಚಾರವಾಗಿ ಬೇಗ ಹೊರಡಬೇಕಿತ್ತು,   ಛೆ.. ಎರಡು ನಿಮಿಷ ಇದಿದ್ರೆ ಚೆನಾಗಿತ್ತು ಅನ್ಕೊತ, ನಿದ್ದೆ ಮಂಪರಲಿ ದಿನನಿತ್ಯದ ಕ್ರಿಯೆ ಮುಗಿಸಿ ,ಗಡಿಬಿಡಿಯಲಿ ಯಾವುದೊ ಎರಡು ಪುಸ್ತಕ, ಕ್ಯಾಮೆರಾ ಮತ್ತು ಕ್ಯಾಮೆರಾ ಸ್ಟ್ಯಾಂಡ್ ಹೆಗಲಿಗೆ ಸಿಗಿಸಿಕೊಂಡು ಹೊರಡುವುದಕ್ಕೆ ಸಿದ್ದನಾದೆ. 

ತಕ್ಷಣಕ್ಕೆ ಹೊರಡುವುದು ಹೇಗೆ ಎಂಬ ದೊಡ್ಡ ಪ್ರಶ್ನೆ ನನ್ನ ಮುಂದೆ? ಒಂದು ಕ್ಷಣ ಗಾಬರಿಗೊಂಡೆ ಸಮಯ ಇನ್ನು ಮುಂಜಾನೆ 5.೦೦ ಗಂಟೆ, ಈ ಸಮಯಕ್ಕೆ ಯಾವ BMTC ಬಸ್ ಸಿಗುವುದಿಲ್ಲ, ಗಾಡಿಯಲ್ಲಿ ಹೋದರೆ ಅದನ್ನು ಎಲ್ಲಿ ನಿಲಿಸುವುದು? ಸರಿ ಅಪ್ಪನನು ನಿದ್ರೆಯಿಂದ ಎಚ್ಹರಿಸಿ nayandalli ಗೆ ಡ್ರಾಪ್ ಮಾಡಿಸಿಕೊಂಡೆ. ಮಗನಿಗೆ 'ಕ್ಷೇಮವಾಗಿ ಹೋಗಿ ಬಾ' ಎಂದು ಹೇಳದೆ ಗಾಡಿ ವಾಪಾಸ್ ತಿರುಗಿಸಿ ಗುರ್ರ್.... ಎಂದು ಮನೆ ಕಡೆ ಹೊರಟರು. ಆ ಸಮಯದಲ್ಲೂ ಸುಮಾರು ಜನ ಬಸ್ ಗಾಗಿ  ಕಾಯುತ್ತ ಕುಳಿತಿದರು,ಒಬ್ಬೊಬ್ರು ಒಂದೊಂದು ಬಂಗಿಯಲ್ಲಿ ನಿಂತಿದರು, ಒಬ್ಬ ಆಕಾಶ ನೋಡುತ ಬೀಡಿ ಸೇದುತ್ತಿದ,  ಚಿಕ್ಕ ಮಗುವೊಂದು ತನ್ನ ಅಪ್ಪನ ಕಾಲನು ತಬ್ಬಿ ನಿಂತು, ಆ ಮುಗ್ದ ಕಣ್ಣುಗಳಿಂದ ಆಗೊಂದು ಹೀಗೊಂದು ಬರುವ ಗಾಡಿಯನು ದಿಟ್ಟಿಸಿ ನೋಡುತ್ತಿತ್ತು. ಇದನೆಲ್ಲ ಗಮನಿಸುತ್ತಿದ್ದ ಹಾಗೆ ಬಸ್ ಬಂತ್ತು ನೋಡಿ!  ಆ ಜನ ಸಾಗರದ ನಡುವೆ ನುಗ್ಗಿ ಸೀಟ್ ಹಿಡಿದು ಕುಳಿತೆ. ಬಸ್ ನಲ್ಲಿ ಅರ್ದದಷ್ಟು ಜನ ನಿದ್ದ್ರೆಯಲಿ ಮಗ್ನರಾಗಿದ್ದರು!  'ಯಾರ ರೀ ಟಿಕೆಟ್-ಟಿಕೆಟ್ ಹಿಂದೆ' ಎಂದು ಮಂಕೀ ಕ್ಯಾಪ್ ಹಾಕಿದ ಕಂಡಕ್ಟರ್ ಟಿಕೆಟ್ ಕೇಳಲು ಬಂದರು, 'ಮೈಸೂರಿಗೆ ಒಂದು ಟಿಕೆಟ್ ಕೊಡಿ' ಎಂದು ಹಸನ್ಮುಖಿ ಗಾಂಧೀಜಿ ಅವರ 100 ರುಪಯೀ ನೋಟು ಕೊಟ್ಟರು ಕಂಡಕ್ಟರ್ ಮುಖದ ಮೇಲೆ ಮಾತ್ರ ನಗುವಿರಲಿಲ್ಲ , 94 ರುಪಯೀ ತಗೊಂಡು 5 ರುಪಾಯಿ ಕೊಟ್ಟು 'ಒಂದು ರುಪಯೀ  ಅಮೇಲ್ ತಗೋಳಿ' ಎಂದು ಮುಂದೆ ನಡೆದರೂ. ನಾನಿನ್ನು ನಿದ್ರೆ ಮಂಪರಿನಲ್ಲಿದ್ದೆ, ಇದಕ್ಕಿದ ಹಾಗೆ ತಲೆಗೆ ಹುಳು ಬಿಟ್ಟಂತೆ ಒಂದು ಪ್ರಶ್ನೆ ಮೂಡಿಬಂತು! 
ಒಂದು ರುಪಾಯಿ ಚಿಲ್ರೆ ತಗೋಬೇಕ? ಅಕಸ್ಮಾತ್ ಇಳಿಯುವ ಗಡಿಬಿಡಿಯಲ್ಲಿ ಮರೆತ್ತು ಹೋದ್ರೆ? ಒಂದು ರುಪಾಯಿಲ್ಲಿ ಏನ್ ಬರುತ್ತೆ? ಕಂಡಕ್ಟರ್ ಅದರಿಂದ ಏನ್ ಮಹಾನ್ ಮಾಡಬಹುದು? ಅದೆಲ್ಲ ಹೋಗ್ಲಿ ಎಲ್ಲರ ಮುಂದೆ ಹೇಗ್ ಒಂದು ರುಪಾಯಿ ಕೇಳೋದು? ಮನಸು ಇಂತಹ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿಕೊಂಡಿತು. 

ಒಂದು ರುಪಾಯಿಲ್ಲಿ ಏನ್ ತಗೋಬಹುದು? ಒಳ್ಳೆ ಚಾಕಲೇಟ್ ಬರೋಲ್ಲ, ನಮ್ಮ ಬಾಲ್ಯದಲ್ಲಿ ಒಂದು ರೂಪಾಯಿಗೆ ಏನೆಲ್ಲಾ ಬರ್ತಿತ್ತು, ಶುಂಟಿ ಪೆಪ್ಪರಮೆಂಟು , ಹಳ್ಕೊವ , ಬೋಟಿ, ಬತ್ತಾಸು, ತೆಂಗಿನ ಕಾಯಿ ಚೂರು, ಜಾಮೂನು,  ನೆಲ್ಲಿಕಾಯಿ, ಮಾವಿನಕಾಯಿ, ಅಮ್ಟೆಕಾಯಿ, ಆಸೆ ಚಾಕಲೇಟ್, ಮೈಸೂರ್ ಪಾಕ್ , ಚಕ್ಕುಲಿ, ಕೋಡುಬಳೆ,ನಿಪ್ಪಟು, ಕೊಬ್ರಿ-ಮಿಠಾಯಿ, ಬಾಂಬೆ ಮಿಠಾಯಿ , ಮತಷ್ಟು ಹೆಸರು ಮರೆತ್ತ ಅನೇಕ ತಿಂಡಿಗಳು ಇವೆ. ಇದಲ್ಲದೆ ಬುಗುರಿ, ಗೋಲಿ, ಗಾಳಿಪಟ ಅಂತ ಎಷ್ಟೆಲ್ಲಾ ಸಿಗುತ್ತಿದವು.ಆದರೆ ಇಂದು ಬೆಂಗಳೂರು ನಗರ ತುಂಬ ವಿಸ್ತಾರವಾಗಿ ಬೆಳೆದು ಹೋಗಿದೆ, ಅವೆಲ್ಲ ಬರಿ ನೆನಪಿಗೆ ಉಳಿದಿರುವ ಮಾತಷ್ಟೇ. ಇನ್ನು ನಗರದ ಕೆಲವು ಬೀದಿಗಳಲ್ಲಿ ಈ ತಿಂಡಿಗಳು ತಮ್ಮ  ಅಸ್ತಿತ್ವ ಉಳಿಸಿಕೊಂಡಿವೆ ಎಂದರೆ ಅದು ಆಶ್ಚರ್ಯದ ಸಂಗತಿಯೇ ಸರಿ. 

ಅದೇ ಒಂದು ರೂಪಾಯಿಗೆ ಇವತ್ತು ಏನ್ ಬರುತ್ತೆ? taste ಇಲ್ಲದ ಒಂದು ಚಾಕಲೇಟ್, 60 ಸೆಕೆಂಡ್ ಮಾತಾಡುವಷ್ಟು coin ಬೂತ್ , ದೇಹದ ತೂಕ ತೋರಿಸುವ ಯಂತ್ರಗಳು, ಮತ್ತೇನು??. ಇದನೆಲ್ಲ ಯೋಚಿಸುವಷ್ಟರಲ್ಲಿ ಮದ್ದೂರ್ ಬಸ್ ಸ್ಟಾಪ್ ಗೆ, ಬಸ್ ಬಂದು ನಿಂತಿತ್ತು. ನಿದ್ರೆಯ ಮಂಪರು ಓಡಿಸಲು ಒಂದು ಕಪ್ ಕಾಫಿ ತರಲು ಹೋದೆ, ಸಕ್ಕರೆ ಪಾಕಕ್ಕೆ ನೊಣಗಳು ಮುತ್ತುವಂತೆ, ಜನರು ಕಾಫೀ ಮಾರುವವನ ಸುತ್ತ ನಿಂತಿದರು. ಹಾಗು ಹೀಗೂ ಮುಂದೆ ಹೋಗಿ 'ಒಂದು ಕಪ್ ಕಾಫೀ...' ಎಂದೇ , ಇವನು ಯಾವ ಊರ್ ದೊಣ್ಣೆ ನಾಯಕ ಎಂದು ಮುಖ ನೋಡದೆ, ಫ್ಲಾಸ್ಕ್ ಇಂದ ಕಪ್ ಗೆ ಕಾಫೀ ಬಗ್ಗಿಸಿ 6 ರುಪಾಯಿ ಚಿಲ್ರೆ ಕೊಡಿ ಅಂದ. ನನ್ನ ಬಳಿ ಚಿಲ್ರೆ ಇರಲಿಲ್ಲ , ತಗೋಳಿ ಚಿಲ್ರೆ ಇಲ್ಲ ಎಂದು 10 ರುಪಾಯಿ ಕೊಟ್ಟೆ, ಮಂತ್ರ ಹೇಳುವ ಪೂಜಾರಿಯಂತೆ ಅದೆನನೋ ಗೊಣಗುತ್ತ 'ತಕ್ಕೊಳಿ, ಮೂರ್ ರುಪಾಯಿ ಅದೇ, ಯಾವಾಗಾದ್ರೂ ಇತ್ತಾಗ್ ಬಂದ್ರೆ ಮರಿದೆ ಒಂದು ರುಪಾಯಿ ತಗೋಳಿ' ಎಂದು ಬೇರೆ ಅವರಿಗೆ ಕಾಫಿ ಕೊಡಲು ಶುರು ಮಾಡಿದ. ಅಲ್ಲ ಮತ್ತೆ ಇಲ್ಲಿಗೆ ನಾ ಯಾಕ ಬರ್ತೀನಿ? ಬಂದ್ರು ಆ ಒಂದು ರುಪಾಯಿ ನೆನಪ ಆಗ್ಬೇಕ್ ಅಲ್ವ? ಇದನೆಲ್ಲ ಯೋಚಿಸುತ್ತ ಯಾವುದೊ ಬಸ್ ಹತ್ತಿದೆ, ಎಲ್ಲ ಹೊಸ ಮುಖಗಳು! ಮತ್ತೆ ಕೆಳಗ್ ಇಳಿದು ನೋಡಿದರೆ ಅದು ಮಡಿಕೇರಿ ಬಸ್, 'ಮಂಕೀ ಟೋಪಿ' ಕಂಡಕ್ಟರ್ ಹುಡುಕುತ್ತ, ನಮ್ಮ ಬಸ್ ಅನ್ವೇಷಣೆ ಮಾಡಿ ಬಂದು ಕುಳಿತೆ. 
ಕಾಫಿ ಮೈ ಮೇಲೆ ಪರದೆ ಹಾಕಿದಂತೆ, ಕೆನೆ ಕುಳಿತ್ತು ತನ ಸ್ವಾದಿಷ್ಟ ಕಳೆದುಕೊಳುತ್ತಿತು, ಬೇಗನೆ ಕಾಫಿ ಮುಗಿಸಿ ಆ ಒಂದು ರುಪಾಯಿ ಬಗ್ಗೆ ಯೋಚಿಸಲು ಶುರು ಮಾಡಿದೆ. ಇದು ಯೋಚಿಸ ಬೇಕಾದ ವಿಷಯವೇ ಅಲವೇ? ನನ್ನ ಹಾಗೆ ಅದೆಷ್ಟೋ ಜನ ಒಂದು ರುಪಾಯಿ 'ಯಾವ ಲೆಕ್ಕ ಬಿಡಿ' ಎಂದು ಸುಮನ್ನೇ ಹೋದವರು ಇದ್ದಾರೆ, ದಿನ ಅದೆಷ್ಟು ಒಂದು ರುಪಾಯಿ ಇವರ ಜೇಬು ತುಂಬುವುದು? ಲೇಕ ಹಾಕುವುದು ಕಷ್ಟವೇ ಸರಿ. 

ದಿನ ನಿತ್ಯದ ಪ್ರಯಾಣಿಕರ ಬದುಕಿನಲ್ಲಿ ಚಿಲ್ರೆ ಗಲಾಟೆ ಇದದ್ದೆ, ಒಂದು ರುಪಯಿಗೊಸ್ಕರ ತಮ್ಮ ಜಗಳದಲ್ಲಿ ಅಪ್ಪ, ಅಮ್ಮ, ಅಕ್ಕಂದಿರನು ಕರೆಯುವ ಜಗಳಗಂಟ ಪ್ರಯಾಣಿಕರು , ಕಂಡಕ್ಟರ್ ಗಳು ಇದ್ದಾರೆ. ಮಜೆಸ್ಟಿಕ್ ಬಸ್ ಸ್ಟಾಪ್ ಅಲ್ಲಿ ದಿನ ಪ್ರಯಾಣಿಸುವವರ ಅನುಭವಗಳನು ಕೇಳಿ ಅಲೆಲ್ಲ ಇಂತಹ ಅನೇಕ ಉದಾಹರಣೆಗಳು ಸಿಗ್ಗುತವೆ. ಚಿಲ್ರೆಗೋಸ್ಕರ ಕದನ ಮಾಡುವುದರಲ್ಲಿ, auntie's ಮತ್ತು ಹುಡುಗಿಯರೇ ಜಾಸ್ತಿ ಎಂದು ಕಂಡಕ್ಟರ್ ಹೇಳುವುದುಂಟು. ಕಾಲೇಜ್ ದಿನಗಳಲ್ಲಿ ನಾನು ನನ್ನ ಗೆಳೆಯರು 410 'a' ಬಸ್ ಅಲ್ಲಿ ಕಾಲೇಜ್ ಗೆ ಹೋಗುತ್ತಿದೆವು, ನಮ್ಮ ಖಾಸ ದೋಸ್ತ್ ಶಿವಣ್ಣ ಎಂಬುವ ಕಂಡಕ್ಟರ್ ಆ ಬಸ್ ಅಲ್ಲಿ ಬರುತ್ತಿದರು, ಒಂದು ದಿನ ಅವರು ಬರದೆ ಹೋದರೆ ಅದೆಂತದೋ ಬೇಸರ, ಕಾಲೇಜ್ ಹುಡುಗರಂತೆ ನಮ್ಮೆಲರ ಜೊತೆ ಇರುತ್ತಿದರು. ಕಾಮಿಡಿ ಟೈಮ್ ಗಣೇಶನಂತೆ ಆಡುತ್ತಿದ ಇವರ ಸ್ವಭಾವ ಎಲ್ಲರಿಗು ಒಂದು ಮನೋರಂಜನೆ ಆಗಿತ್ತು. ಒಂದು ದಿನ ಶಿವಣ್ಣ ಅವರ ಜೇಬು ಹರಿದು ಹೋಗಿತ್ತು, ಕೂದಲೆಲ್ಲ ಕೆದರಿ ಕಣ್ಣು ಕೆಂಪಾಗಿದ್ದುವು, "ಏನ್ ಅಂಕಲ್ ಮನೆಯಲ್ಲಿ ಹೆಂಡ್ತಿ ಹತ್ರ ಜಗಳ ಮಾಡ್ಕೊಂಡ್ ಬಂದ್ರ" ಎಂದು ಪ್ರಶ್ನೆ ಕೇಳಿ ಮುಗುಳ ನಕ್ಕೆ, ಕೋಪ ಮಾಡಿಕೊಳ್ಳದೆ ಶಾಂತ ಸ್ವಭಾವದಿಂದ, "ಇಲ್ಲಯ್ಯ, ವಿಜಯನಗರ ಬಸ್ ಸ್ಟಾಪ್ ಅಲ್ಲಿ ದಡುತಿ ದೇಹದ ಹೆಂಗಸು ಮಡಿದ ಕೆಲಸ ಇದು, ಚಿಲ್ರೆ ಕೇಳಿದ್ರು ಇಲ್ಲ ಸಂಜೆ ಬನ್ನಿ ಒಟ್ಟಿಗೆ ಕೊಡ್ತೀನಿ ಅಂತ ಸ್ವಾಭಾವಿಕವಾಗಿ ಹೇಳದೆ ಅದಕ್ಕೆ ಅವಳು ತಪ್ಪು ತಿಳಿದು , ಬೇರೆ ಯಾವುದಕ್ಕೋ ಕರದೇ ಅಂತ ಹಿಂಗೆ ಚಪಾತಿ ತಟ್ಟಿದಳು. ಎಲ್ರು ಗಲಾಟೆ ಬಿಡ್ಸಿ ಆ ಮೂದೇವಿಗೆ ಬುದ್ದಿ ಹೇಳಿದ್ ಮೇಲೆ 'ಸಾರಿ, ಬೇಜಾರ್ ಮಾಡ್ಕೋ ಬೇಡಿ, ತಪ್ಪಾಯ್ತು ಹೊಟ್ಟೆಗ್ ಹಾಕೋ ಬಿಡಿ' ಅಂತ ಪೇಸ್ damage ಮಾಡಿ ಹೋದಳು. ಅಲ್ಲ ಏನ್ ಆಯ್ತು ಅಂತ confusion ಅಲ್ಲಿ ಗೊತ್ತಾಗದೆ ನನ್ನಿಗೆ ಒಂದು ಪ್ರಶ್ನೆ ನೆನಪಯ್ತ್ತು, ಹೀಗೂ ಉಂಟೆ!" 
ದಿನ ಪೂರ್ತಿ ಅವರ ಆ ಪಜೀತಿ ನೆನಪಿಸಿಕೊಂಡು ನಗುತಿದೆವು. ಹೀಗೆ ಅದೆಷ್ಟೋ ಚಿಲ್ರೆ ಜಗಳ ಬೆಂಗಳೂರು ನಗರದಲ್ಲಿ ದಿನ ನಿತ್ಯ ಕಂಡು ಬರುತ್ತದೆ. ಇದು ಬರಿ ಪ್ರಯಾಣಿಕರಿಗೆ ಅಷ್ಟೇ ಸೀಮಿತವಲ್ಲ ತರಕಾರಿ ಮಾರುವವ, ಅಂಗಡಿಯವರು, ಪೇಪರ್-ಹಾಲು ಮಾರುವವರು, ಹೋಟೆಲ್ ಮತ್ತು ಉಳಿದವರ ದಿನ ನಿತ್ಯದ ಚಿಲ್ರೆ ಪಜೀತಿ. ಮೈಸೂರ್ ಬಸ್ ಸ್ಟಾಪ್ ಹತ್ತಿರ ಬರುತಿತ್ತು, ಬಸ್ ಸ್ಟಾಪ್ ಮುಂಚಿತವಾಗಿಯೇ ಇಲ್ಲಿದುಕೊಳಲು ಮುಂದೆ ಹೋದೆ. ಒಂದು ಕಡೆ ಚಿಲ್ರೆ ಕೇಳುವ ಮನಸು ಇನ್ನೊಂದು ಕಡೆ ಹೋಗ್ಲಿ ಬಿಡು ಯಾರ ಕೇಳ್ತಾರೆ ಅನ್ನೋ ಸೋಂಬೇರಿತನ. ಬೇಡ ಬಿಡು ಎಂದು ಮತ್ತಷ್ಟು ಮುಂದೆ ಹೋಗಿ ನಿಂತೇ , ಕಂಡಕ್ಟರ್ ಕರೆದು "ಚಿಲ್ರೆ ತಗೊಳ್ರಿ" ಎಂದರು. ಆಶ್ಚರ್ಯ! ನನ್ನ ಇಷ್ಟು ದಿನದ ಬಸ್ ಪ್ರಯಾಣದಲ್ಲಿ ಇಂತಹ ವ್ಯಕ್ತಿತ್ವವನ್ನು ನೋಡಿರಲಿಲ್ಲ, ಒಂದು ರುಪಾಯಿ ಚಿಲ್ರೆ ತಗೊಂಡು ಮುಗುಳ ನಕ್ಕಿ ಕೆಳಗೆ ಇಳಿದೆ. ಪರವಾಗಿಲ್ಲ ಒಳ್ಳೆ ಕಂಡಕ್ಟರ್ ಕೂಡ ನಮ್ಮ  ಸುತ್ತ-ಮತ್ತ ಇದಾರೆ ಎಂದು ಹೆಮ್ಮೆ ಪಡುತ್ತ, ಕೆಲಸದ ಹಾದಿ ಹಿಡಿದ್ದು ಚಿಲ್ರೆ ಕಥೆಗೆ ಒಂದು ಪೂರ್ಣ ವಿರಾಮವಿಟ್ಟೆ.

-ಇಂತಿ ಚಿಲ್ರೆ ಕೇಳದ,
   ನಾನ್ಯಾರೋ.. 

Friday, January 6, 2012

ನಿರಂತತ್ತೆಯಲಿ ನಾನೊಂದು.....

















ಕೆಲವೇ ಕ್ಷಣದಲ್ಲಿ ಸೂರ್ಯ ಪ್ರತಿ ದಿನದ ಮುಕ್ತಾಯಕ್ಕೆ ಪೂರ್ಣ ವಿರಾಮ ತೆಗೆದುಕೊಳುವ ಸಮಯ, ಬೆಳಕು ತನ್ನ ಅಸ್ತಿತ್ವ ಕಳೆದುಕೊಂಡು ಕತ್ತಲೆಯಲ್ಲಿ ಮರೆಯಾಗುವ ವೇಳೆಗೆ, ಮನಸಿನ ಮೂಲೆಯಲ್ಲಿ ಕುಳಿತ್ತ ಅನಾಮಿಕನ ಪ್ರಶ್ನೆಯೊಂದು ನೆನಪಾಯಿತು! ಪ್ರಶ್ನೆಗೆ ಉತ್ತರ ಸಿಗುವುದೋ ಇಲ್ಲವೋ? ಇಲ್ಲ ಶಾಶ್ವತವಾಗಿ ಕಾಲದ ಅನಂತತೆಯ ಪಥದಲ್ಲಿ ಎಲ್ಲವೂ ಬದಲಾಗುವುದೋ ಇಲ್ಲವೋತಿಳಿಯದು? ಯಾವುದಕ್ಕೂ ಇಲ್ಲಿ ಉತ್ತರ ಪ್ರಶ್ನೆಗಳಿಲ್ಲ.

ಅಂದ ಹಾಗೆ ನನ್ನ ಪರಿಚಯದ ವಿಷಯವೇ ಮರೆಯಿತ್ತು ನೋಡಿ , ಮಹಾನಗರದ ಒಂದು ಉದ್ಯಾನದಲ್ಲಿ ನನ್ನೊಂದು ಕುರ್ಚಿ.
ಏನಪ್ಪಾ ಕುರ್ಚಿಯದೆನು ಸಮಸ್ಯೆ? ಇಲ್ಲಿ ಅದರ ಮಾತೇನು? ಎಂದೆಲ್ಲ ಪ್ರಶ್ನೆ ಮೂಡಿದರೆ, ಇಂತಹ ಯಾವುದೇ ಪ್ರಶ್ನೆಗೂ ಉತ್ತರವಿಲ್ಲ. ಏಕೆಂದರೆ ನನ್ನೊಂದು ಕುರ್ಚಿ, ಪ್ರಪಂಚದ ಒಡನಾಟಕ್ಕೆ ಜೀವಂಶ ಇಲ್ಲದೆ ಇರುವ ಒಂದು ನಿರ್ಜಿವ ವಸ್ತು.

ನಿಮ್ಮೆಲ್ಲರ ಹಾಗೆ ನನ್ನ ದಿನ ನಿತ್ಯದ ಸಮಯವ ಕ್ರಿಯಾಶೀಲತೆ ಮತ್ತು ಕೌಶಲ್ಯತೆಗಳಲ್ಲಿ ಮುಕ್ತಾಯವಾಗುವುದಿಲ್ಲ, ನನ್ನದು ಶಾಶ್ವತವಾದ ಜಡತ್ವ. ಮಳೆ, ಗಾಳಿ, ಬಿಸಿಲಲ್ಲಿ ಬೆರೆತು, ಕಾಲದ ನಿರಂತತೆಯಲ್ಲಿ ಸದಾ ಜಡತ್ವವನ್ನು ಸಾರುವ ನಿರ್ಜೀವ ವಸ್ತು.  ದಣಿದು ಬಂದ ಕೆಲವರಿಗೆ ಕುಳಿತುಕೊಳ್ಳುವ ಜಾಗ, ಹರಟೆ ಹೊಡೆಯುವವರಿಗೆ ಮೆಚ್ಚಿನ ಜಾಗ, ಇನ್ನು ಕೆಲವರಿಗೆ ಮಲಗುವ ಸ್ಥಳ,ಜೋಡಿ ಪ್ರೇಮಿಗಳಿಗೆ romance ಮಾಡುವ ಸ್ಥಳ, ಏಕಾಂಗಿ ಜೀವಗಳಿಗೆ ನೆನಪನ್ನು ಮೆಲಕು ಹಾಕುವ ಸ್ಥಳ, ಮುದ್ದಿ ಜೀವಗಳಿಗೆ ನಿತ್ಯ ಸಮಾಚಾರ ಪತ್ರಿಕೆ ಓದುವ ಸ್ಥಳ. ಹಲವರು ನನ್ನ ಮೇಲೆ ಕುಳಿತ್ತು ಜೀವನದ ಕಷ್ಟಗಳನು ಮಾತನಾಡುತ್ತಾರೆ, ಮತ್ತೆ ಇನ್ನಷ್ಟು ಜನ ವ್ಯವಹಾರಿಕ ಚಿಂತನೆಗಳನ್ನು ಮಾಡುತ್ತಾರೆ. ಮನೆ ಬಿಟ್ಟು ಬಂದ ಕೆಲವು ಪೋಲಿಗಳಿಗೆ, ರಾತ್ರಿ ಸಮಯ ಪೊಲೀಸರ ಬೂಟಿನ ಏಟು ತಪ್ಪಿಸಿಕೊಂಡು ಅಡಗಿ ಕೂರುವ ವಾಸಸ್ಥಳ ನಾನು. ಕತ್ತಲ್ಲೆಯ ಕಣ್ಣಾ ಮುಚ್ಚಾಲೆಯಲ್ಲಿ ಹೆಣ್ಣು ಮಕ್ಕಳ ಸೆರಗಿನ ಜೊತೆ ರಂಗನೆರಿಸುವ ನೀಚ ಮನುಷ್ಯರಿಗೆ room ಆಗಿರುವ ವಸ್ತು ನಾನು. ಇನ್ನು ಮುಂತ್ತಾದ ಅನೇಕ ಚಟುವಟಿಕೆಗಳಿಗೆ ನನ್ನೊಂದು seasonal reason  ಎಂದರೆ ತಪ್ಪಾಗಲಾರದು.

ದಿನ ನನ್ನ ನೋಡಲು, ನನ್ನ ಜೊತೆ ಯಾವುದೊ ಅರಿಯದ ಬಾಷೆಯಲ್ಲಿ ಮಾತನಾಡಲು, ಹುಚ್ಚು ಹಿಡಿದ ಒಂದು ಹುಡುಗಿ ಬರುತ್ತಿದಳು, ಮನುಷ್ಯ ಜಾತಿಗೆ ಸೇರಿದ ಅವಳ ಮಾನಸಿಕ ಪರಿಸ್ಥಿತಿಯನು ಕಂಡು ಕೆಲವರು ಪಾಪ ಎಂದು ಮುಂದೆ ನಡೆದು ಹೋಗುತ್ತಿದರು. ಅವಳ ಹರಿದ ಬಟ್ಟೆಯಲ್ಲಿ ಕಾಣುವ ಅಂಗಗಳನು ನೋಡುವ ವಿಕೃತ ಮನಸಿನ ಮನುಷ್ಯ ಜೀವಿಗಳ ಹೀಯಾಳಿಕೆಗೆ ಬೆದರಿ ನನ್ನ ಹಿಂದೆ ಅವಿತ್ತು ಕುಳಿತ್ತಿರುತಿದಳು. ಎಷ್ಟೋ ರಾತ್ರಿಗಳು ಖಾಕಿ-ಖಾವಿಗಳ ಕೆಟ್ಟ ಕಣ್ಣಿಗೆ ಸಿಕ್ಕಿ ಬಲಿಯಾಗುತ್ತಿದಳು, ಆ ನೋವಿನ ಬೆಂಕಿಯಲ್ಲಿ ಬೆಂದು ನನ್ನ ತಬ್ಬಿ ಕಣ್ಣೇರು ಇಟ್ಟಾಗ, ಅವಳ ಅರಿಯದ ಮೂಕ ಧ್ವನಿಗೆ ಮತ್ತಷ್ಟು ಮೂಕವಾಗಿ ನಿಷ್ಪ್ರಯೋಜಕ ವಸ್ತುವಾಗಿದೆ, ಅವಳ ಪರಿಸ್ಥಿತಿಗೆ ಬಾಯಿ ಬಿಟ್ಟು ಮಾತನಾಡದೆ ಕಾಲದ ಜೊತೆಯಲ್ಲಿ ಸಾಗುವ ವಸ್ತುವಷ್ಟೇ ನನ್ನ ಅಸ್ತಿತ್ವ.

ಬರಿ ಮನುಷ್ಯರಿಗಷ್ಟೇ ಸೀಮಿತವಾಗದೆ ಭೂಗೋಳದ ವಿಸ್ಮಯಗಳಲ್ಲಿ ಒಂದಾಗಿರುವ ಜೀವರಾಶಿಗಳಿಗೆ ನೆರಳಾಗಿರುವೆ. ಇರುವೆ, ಜೇಡ, ಹೆಗ್ಗಣ, ಅಳಿಲು, ಚಿಟ್ಟೆ ಮುಂತಾದ ಜೀವಿಗಳು ನನ್ನ ಜೊತೆ ದಿನ ನಿತ್ಯ ಒಡನಾಟ ಬೆಳೆಸುತ್ತವೆ. ಮಳೆ ಬಂದಾಗಲೆಲ್ಲ ಮತ್ತೆ ಬಿಸಿಲಿನ ಬೇಗೆಯಿಂದ ಬಳಲ್ಲಿದಾಗ ನಿದ್ರಿಸಲು ಬಡಕಲು ಶರೀರದ ನಾಯಿಯೊಂದು ಬರುತ್ತದೆ, ಕೆಲವೊಮ್ಮೆ ಪಕ್ಷಿಗಳು ನನ್ನ ಮೇಲೆ ಬಿದ್ದ ತಿಂಡಿಗಳನು ಹೆಕ್ಕಲು ಬರುತ್ತವೆ, ಆದರು ಯಾವ ಜೀವಿಗಳಿಗೂ ಸ್ಪಂದಿಸದೇ ನಿಂತಲ್ಲೇ ನಿಂತು ರಂಗಭುಮಿಯಲಿ ನಡೆವ ಬದುಕನು ವೀಕ್ಷಿಸುವ ಮೂಕ ವಸ್ತು..

ಅದ್ದೋ!!! ನಮ್ಮ ಮಾತಿನ ನಡುವೆ ಸೂರ್ಯ ಮೆಲ್ಲಗೆ ದಿಗಂತದಿ ಜಾರಿಕೊಂಡ, ಇದೆ ಸಮಯದಿ ಥಟ್ಟನೆ ಬೀದಿ ದೀಪ ಅಂಟಿಕೊಂಡು, ಕತ್ತಲದ ಕೆಲವು ಭಾಗಗಳನ್ನು ಸೀಳಿ ಬಿಟ್ಟಿತು. ಬೀದಿ ದೀಪದ ಕನ್ನಡಿಗೆ ಆಕರ್ಷಣೆಗೊಂಡ ಒಂದಷ್ಟು ಹುಳುಗಳು ಗುಯ್.. ಗುಯ್.. ಎಂದು ಅದರ ಬೆಳಕಿನ ಕಡೆ ಹಾರುತ್ತಿದವು, ಅದನು ಹಿಡಿದು ಸ್ವಲ್ಪ ಹೊಟ್ಟೆ ತುಂಬಿಸಿಕೊಳುವ ಪ್ರಯತ್ನದಲಿ ಬಡಕಲು ಶರೀರದ ನಾಯಿ ಹರ ಸಾಹಸ ಮಾಡುತಿತ್ತು. ಇದೆಲ್ಲದರ ನಡುವೆ ಇದಕ್ಕಿದ ಹಾಗೆ ಬಾವಲಿಯೊಂದು ಹಾರಿ ಬಂದು ಲೈಟ್ ಕಂಬ ಹಿಡಿದು ಕುಳಿತ್ತಿದ ದೊಡ್ಡ ಹಸಿರು ಮಿಡತೆ ಒಂದನು ಹಿಡಿದು, ನನ್ನೆದುರಿನ ಮರದ ಮೇಲೆ ಕುಳಿತ್ತು ಕೊಂಡಿತ್ತು. ಬಾವಲಿ ತನ್ನ ಬೇಟೆಯನ್ನು ಚಪ್ಪರಿಸುತ್ತಿರುವ ದೃಶ್ಯ ನೋಡಿದ ನಾಯಿ ಮರದ ಕೆಳಗೆ ನಿಂತು ಬೌ-ಬೌ-ವೌ ಎಂದು ಕೂಗಿದ ಸಮಯ! ನಿಶಬ್ದತ್ತೆಯಿಂದ ಕೂಡಿದ ಉದ್ಯಾನವನದ ಮೌನ ಮುರಿಯಿತ್ತು. ಬಾವಲಿ ನಾಯಿಯ ಯಾವ ಕಿರುಚಾಟ್ಟಕು ಜಗ್ಗದೆ ತನ್ನ ಬೇಟೆ ಮುಗಿಸಿ ಬೇರೆ ಯಾವುದೊ ದಿಕ್ಕಿನಲ್ಲಿ ಹಾರಿ ಹೋಯಿತು. ನಾಯಿ ತನ್ನ ಹೊಟ್ಟೆಯ ಪರಿಸ್ಥಿತಿಗೆ ಕುಯ್ಯಿ.... ಎನ್ನುತ ನನ್ನ ಕೆಳಗೆ ಬಂದು, ಬಾಲ ಮುದ್ದುರಿ ಲೈಟ್ ಕಂಬದ ಕಡೆ ಹಾರುತ್ತಿದ ಹುಳುಗಳನ್ನು ನೋಡುತ್ತಾ ಮಲಗಿತ್ತು. ಇಲ್ಲಿಯವರೆಗೆ ಚಟುವಟಿಕೆಗಳಿಂದ ಕೂಡಿದ ಉದ್ಯಾನವನ ಮೌನ ಸ್ವರೂಪ ಪಡೆದು, ಸರ್ವವು ನಿಶ್ಚರವಾಗಿ ಹೋದವು. ಕಪ್ಪು ಬಿಲದಿಂದ ಇಲಿ ಮತ್ತು ದೈತ್ಯ ಹೆಗ್ಗಣದ ಗುಂಪು ಆಹಾರ ಸಂಶೋಧನಾ ಶುರು ಮಾಡಿದವು, ಯಾವುದೊ ಎರಡು ಹೆಗ್ಗಣಗಳಿಗೆ ಆಹಾರ ಸಿಕ್ಕಿತೆಂದು ಮಿಕ್ಕವೆಲ್ಲವೂ ಬಂದು ಅವುಗಳ ಜೊತೆ ಕಚ್ಚಾಡ ತೊಡಗಿದವು. ಇದಕ್ಕಿದ ಹಾಗೆ ಮನುಷ್ಯರ ವಾಹನದ ಸದ್ದು ಕೇಳಿ ತಿಂಡಿಯ ವಿಷಯ ಮರೆತ್ತು ದಿಕ್ಕಾಪಾಲಾಗಿ ಬಿಲದ ಬಾಗಿಲೊಳಗೆ ಓಡಿ ಹೋದವು. ಮತ್ತಷ್ಟು ಸಮಯ ಮೌನ ಆವರಿಸಿದ ಸಂದರ್ಬ.. ಸ್ವಲ್ಪ ಸಮಯ ಕಳೆದು ಹೆಗ್ಗಣ ಒಂದು ಬಿಲದ ಬಾಗಿಲಿಂದ ಪಿಳಿ ಪಿಳಿ ನೋಡುತ್ತಾ ಮೇಲೆ ಬಂತ್ತು ಮಿಕವೆಲ್ಲ ಒಂದೊಂದಾಗಿ ಮೇಲೆ ಬಂದವು.

ಇದೆಲ್ಲ ದಿನನಿತ್ಯ ನಡೆವ ದೃಶ್ಯಾವಳಿಗಳು, ನನ್ನ ಸುತ್ತ ಮುತ್ತಲಿನ ಚಟುವಟಿಕೆಗಳು, ನನಗೂ ಎಲ್ಲ ಜೀವಿಗಳ ಹಾಗೆ ಸ್ಪಂದಿಸಲು ಇಷ್ಟ ಆದರೆ ಅದೊಂದು ಕಲ್ಪನೆಯ ಪ್ರಪಂಚದ ಗಾಳಿ ಮಾತು. ಅದ್ಯಾವುದು ನನ್ನ ಕಾಲವಲ್ಲ, ಜಡತ್ವ ನನ್ನ ಪಾಲಿಗೆ ಬಂದ ಅಮೃತ. ಯಾರ ಭಾವನೆ, ದುಃಖ, ಸಂತೋಷಗಳು ನನಗೆ ತಿಳಿಯುವುದಿಲ್ಲ. ಯಾವ ಜೀವಿಯ ಹಸಿವಿನ ಪರಿವು ನನಗೆ ಗೊತ್ತಿಲ್ಲ. ಮನುಷ್ಯರ ಅಥವಾ ಪ್ರಾಣಿಗಳ ಯಾವ ಒಡನಾಟಕ್ಕೂ ಸ್ಪಂದಿಸುವುದಿಲ್ಲ. ನನ್ನೊಂದು ಕಲ್ಲು ಯಾವ ಹುಟ್ಟು ಸಾವಿಗೂ ಚಿಂತಿಸುವ ಯೋಚನಾ ಕ್ರಿಯಾ ಶಕ್ತಿ ಇಲ್ಲ. ಕಾಲದ ಎಲ್ಲ ಋತುಚಕ್ರದಲ್ಲೂ ನನ್ನೊಂದು ಜಡ ವಸ್ತುವಷ್ಟೇ, ನನ್ನ ಅಂತ್ಯ ಇಲ್ಲೇ, ಇದೆ ಜದತ್ವದಲ್ಲಿ. ಬದುಕು ನಾವು ಬಂದ ಪಥದಲ್ಲಿ ಮತ್ತೊಂದು ಬಾರಿ ಕರೆದೊಯ್ಯುತ್ತದೆ.

ಬಹುಷ್ಯ ಇದ್ಯಾವುದು ಹುಚ್ಚುತನದ ಲೇಖನಿ ಕುರ್ಚಿಯದು ಎಂದು ಭಾವಿಸಿದ್ದರು ಚಿಂತೆಯಿಲ್ಲ. ಇಷ್ಟೆಲ್ಲಾ ಹೇಳಿದ ಮೇಲೆ ಮತ್ತೇಕೆ ಇದರ ಮಾತು, ಎಂಬುದು ನಿಮ್ಮ ಪ್ರಶ್ನೆಯಲವೇ??? ಮೊದಲನೇ ಸಾಲುಗಳಲ್ಲಿ ನಾ ಹೇಳಿದ ಹಾಗೆ "ಮನಸಿನ ಮೂಲೆಯಲ್ಲಿ ಕುಳಿತ್ತ ಅನಾಮಿಕನ ಪ್ರಶ್ನೆಯೊಂದು ನೆನಪಾಯಿತು" ಎಂದು ಹೇಳಿದೆ ಆ  ಮಾತು ನೆನಪಿಗೆ ಬಂತ್ತು, ಮತ್ತೆ ಮತ್ತೆ ಮೂಡಿ ಬರುವ ಆ ಪ್ರಶ್ನೆಗೆ ಉತ್ತರ ಬೇಡ, ಆ ಪ್ರಶ್ನೆ ಏನೆಂದರೆ

ನಿರಂತತ್ತೆಯಲಿ ನಾನೊಂದು.....???????????


ಇಂತಿ ಕುರ್ಚಿಯ ಪರವಾಗಿ,
ನಾನ್ಯಾರೋ