Dear???(ಏನ್ ಅಂತ ಕರಿಲೆ ನಿನ್ನ),
ಅಲ್ಲ ಕಣೆ ನಿನ್ನು ಹುಟ್ಟಿದೆ ನನಗೋಸ್ಕರ ನಾನುವೇ ಹುಟ್ಟಿದು ನಿನಗೋಸ್ಕರ ಅಂತ think ಮಾಡಿದ ನಂಗೆ, ನೀ ಹಿಂಗ್ ಮಾಡಬಹುದ ಅಂತ? ಚಿನ್ನ ನಿನ್ನ ನಾ ನೋಡಿದ ಮೊದಲ್ನೇ ದಿನ ನೆಪ್ತಿ ಮಾಡ್ಕೋ? ನೀ ಒಂದ್ ರೌಂಡ್ ಸ್ನಾನ ಮಾಡಿ ಪ್ರೆಶ್ ಆಗಿ ಬಂದು ಮಿಂಚ್ತಿದಲ ಅದ್ನ ನಾ ನೋಡಿ ನಿಂಗೆ ಅಲೆಲೆಲೇಲೆ ಸುರಸುಂದರಂಗಿ ಅಂದಿದು :)
ಹಂಗೆ ನಿನ್ ಬಂದಿದ್ ಖುಷಿಗೆ, ಜೋಲ್ ಒರ್ಸ್ಕೊಂದು ಕಿಸಿತ ನಿನ್ನ ಮುಟ್ಟಿದ current ಸ್ಪರ್ಶಕೆ ಕಾಗೆ ಹಂಗ ಆಗಿದ್ ಹೆಂಗೆ ಮರಿಲಿ ನನ್ ಬುಲ್ ಬುಲ್.
ಆಶ್ಚರ್ಯ ಕಣೆ ನೀ ಬಂದಾಗ್ ಇಂದ ನಾವು ಎಷ್ಟು ಕಡೆ ತಿರ್ಗಿದಿವಿ, ನಾವು ಹೋಗ್ದಿರೋ Road ಇಲ್ಲ, ತಿರಗ್ದೆರೋ ಜಾಗ ಇಲ್ಲ, ಸುತ್ತದೆ ಇರೋ ಊರು ಇಲ್ಲ. ಎಷ್ಟು ಸಾರಿ ಕೆಳಗ್ ಬಿದಿದಿವಿ, ಎಷ್ಟು ಸರಿ ನಾ ನಿನ್ನ ಕೈ ಹಿಡಿದು ಎತ್ತಿದಿನಿ. ಕೆಲವ ಸರಿ ನಿಂತಿದ್ ಜಾಗ್ದಲೆಲ್ಲ ಸುಮ್ನೆ ಕಾಲ್ ಜಾರಿ ಬಿದ್ದಿದ್ಯ bad ಗರ್ಲ್!
ಆದರು ನಿನ್ ಅಂದ್ರೆ ಬೊ ಪೀರುತಿ ಕಣೆ, ಅದೇನೋ ಹೇಳೋಕ್ ಆಗದೆ ಇರೋ ಸಂಬಂಧ ನಮ್ ಇಬ್ರುದು "made for each other" ಅಂತಾರಲ್ಲ ಅದು :D
ನಿನ್ನ ದಿನ ಮುಟ್ಟದೆ ಇದ್ರೆ ನನ್ ದಿನ complete ಆಗೋಲ, ನಿನ್ನ ಒಳಗಿಂದ ಅದೇನೋ ಒಂದು ಸಂಚಾರ ನನ್ನೊಳಗೆ flow ಆಗಿ ಹಂಗೆ He-man ಅದಾಗ್ ಇರುತ್ತೆ ನಿನ್ನ ಸ್ಪರ್ಶ, ಎಂತ ಶಕ್ತಿನೇ ನಿಂದು? ನಿನಗೆ ಅಂತ ಒಂದು ಹೆಸರು ಇದೆ ಅದ್ನ ಇವಗ್ಲೆ ಹೇಳಿದ್ರೆ ಓದ್ತಿರೋರು ನಿನ್ ಯಾರು ಅಂತ ತಿಳಿಯುತ್ತೆ. ಇವಗ್ಲೆ ಬೇಡ ಆಮೇಲೆ ಹೇಳ್ತೀನಿ. ಸ್ವಲ್ಪ ಕಾವ್ಯಾತ್ಮಕ ಆಗ್ತೀನಿ ಇವಾಗ ಕೆಲ್ಸ್ಕೊಂದು ಇದು ನಾಚಿಕೆ ಆದ್ರೆ ತಬ್ಕೋ, ಇಲ್ಲ ಬೇಸರ ಆಗಿ ಪೀಟಿಲು ಅಂದ್ರೆ ಹೇಳು door ಮುಚ್ತೀನಿ. ಶುರು ಮಾಡ್ತೀನಿ!!
ಅಮಾವಾಸ್ಯೆ color ಅವಳೇ, ಮಿಂಚಿನ ಕಣ್ಣವಳೇ,
ಅವಾಗ್ ಅವಾಗ್ ಕೈ ಕೊಡುವವಳೇ
ನಿನ್ ಅಂದ್ರೆ loveu ಕಣೆ, ನಿನ್ ಬಿದ್ರೆ ನೋವು ಕಣೆ.
ಆಕಾಶ ಅಲ್ಲೇ ಇರಲ್ಲಿ, ಭೂಮಿ ತಿರುಗ್ತಾ ಇರಲಿ
ಸೂರ್ಯ light ಕೊಡ್ತಾ ಇರಲಿ, ಗಾಳಿ ಬೀಸ್ತ ಇರಲಿ
ನಮ್ಮ ಪ್ರೀತಿ ಮಾತ್ರ ಹಿಂಗೆ ಸದಾ ಕಾಲ fresh ಆಗಿರಲ್ಲಿ
ನಿನಗಿಂತ ಚೆನ್ನಾಗಿರೋ ಹುಡುಗಿ ಬರಲಿ
ಆದರು ಮನಸು ಮಾತ್ರ ನಿಂಗೆ, ನೋಟ ಮಾತ್ರ ಅವಳಿಗೆ
ನಾನೇನು ಸವ್ಯಸಾಚಿ ಅಲ್ಲ ಹಂಗಂತ ಪೋಲಿ ಹುಡುಗನು ಅಲ್ಲ*
ಸುಮ್ಕೆ lines ಜಾಸ್ತಿ ಆಯಿತು ಅಂತಿಯ? ಸರಿ last ಡೈಲಾಗ್
ಹಿಂದೆ ಹೇಳಿರೋಲ್ಲ ಮುಂದೆ ಕೆಲಿಸಿಕೊಂಡ್ ಇರೋಲ್ಲ
ಆದರು ಏನ್ ಹೇಳ್ಬೇಕು ಅಂತ ಗೊತ್ತಿಲ
ಮೇಲ್ಗಡೆ ಇರೋ ಕವನದಲ್ಲಿ spelling mistake ಇದ್ರೆ ಜವಾಬ್ದಾರಿ ನಾನಲ್ಲ
ನಾನವನಲ್ಲ ನಾನವನಲ್ಲ
ಹಿಂಗೆ ಹುಚ್ ಹುಚಂಗೆ ಏನ್ ಏನೋ ಬರಿತ್ತ ಇದೀನಿ, ನನ್ನಿಂದ ನಿಂಗೆ ಬೇಸರ ಆಗಿದ್ರೆ i am sorry ಅಂತೆಲ್ಲ ಡೈಲಾಗ್ ಹೇಳೋಲ್ಲ ಬೇಜಾರ್ ಮಾಡ್ಕೋ ಯಾಕ ಅಂದ್ರೆ ನಿನ್ ಜೊತೆ ನಾನು ಬಿದಿದ್ದಿನಿ. ನನಿಗ್ ಗೊತ್ತು ಮೋಡದ ಹಿಂದೆ ಇರೋ ಚಂದ್ರನ ಹಾಗೆ ನಿನ್ನ ಕೋಪ ಹೊರಗ ಬಂದು ನಿನ್ನ ಪ್ರೀತಿ ಬೆಳಕು ನನ್ನ ಬಿಗಿದಪ್ಪಬೇಕು. ಈ ಜೀವನ ಅಲ್ಲ ಮುಂದೆ ಎಷ್ಟೇ ಜನ್ಮ ಇದ್ರೂ ನಿನ್ನಂತ ಹುಡುಗಿ ಸಿಗಲ್ಲಿ. ಇವತ್ತಿಗೆ ನಿನ್ನು 50,000km ಕಂಪ್ಲೀಟ್ ಮಾಡಿದ್ಯ ಚಿನ್ನ :D ನೋಡಿದ್ಯ ನಮ್ journey ಹೆಂಗ್ ಇತ್ತು ಅಂತ. ಸರಿ ಇಷ್ಟೊಂದೆಲ್ಲ ಹೇಳಿ ಸುಸ್ತ್ ಆಗೋಗದೆ, ಬಾ ಮನೆ ಕಡೆ ಹೋಗೋಮ ಟೈಮ್ ಆಯಿತು.
ಏನು?? ಒಹ್ ನಿನ್ ಯಾರು ಅಂತ ಹೇಳು ಅಂದ !! ಇಲ್ಲ ಅಂದ್ರೆ ಜನ ಉಗಿತ್ತಾರೆ ಅಂತನ. ಪ್ರಿಯ readersಗಳೇ ಇಷ್ಟೊತ್ತು ನಾ ಹೇಳಿದು ವರ್ಣಿಸಿದು ಇಂತಿ ನನ್ನ ಪ್ರೀತಿಯ bike ಬಗ್ಗೆ ಅಲಿಯಾಸ್ ಬ್ಲಾಕ್ ಬ್ಯೂಟಿ (pulsar135ls).
ನಾ ಹೋಗ ಬತ್ತಿನಿ tata birla :D
ಇಂತಿ,
ನಾನ್ಯಾರೋ