"ನನಗು ನಿನಗು ಕಣ್ಣಲ್ಲೆ ಪರಿಚಯ, ಸನಿಹ ಸುಳಿವ ಮನದಾಸೆ ಅತಿಶಯ, ಏನೋ ಆಗಿದೆ ನನಗಂತು ಸಂಶಯ" ಅರಮನೆ ಚಿತ್ರದ ಈ song ಅಲ್ಲಿ ಹೀರೋ ಜಾಗದಲಿ ನಾನಿದೆ, ಇನ್ ಏನು ನಟಿ ರೋಮ ಅವರಿಗೆ ಇ ಲವ್ ಯು ಚಿನ್ನ ಎಂದು ಹೇಳಬೇಕು!! ಅದೇ ಸಮಯಕ್ಕೆ ಸರಿಯಾಗಿ ಅಲಾರಾಂ ಕಿರುಚತೊಡಗಿತು. ಸಮಯ ಆಗಲೇ ಮುಂಜಾನೆ 4.30 !! ಮೈಸೂರಿಗೆ ಯಾವುದೊ ಕೆಲಸದ ವಿಚಾರವಾಗಿ ಬೇಗ ಹೊರಡಬೇಕಿತ್ತು, ಛೆ.. ಎರಡು ನಿಮಿಷ ಇದಿದ್ರೆ ಚೆನಾಗಿತ್ತು ಅನ್ಕೊತ, ನಿದ್ದೆ ಮಂಪರಲಿ ದಿನನಿತ್ಯದ ಕ್ರಿಯೆ ಮುಗಿಸಿ ,ಗಡಿಬಿಡಿಯಲಿ ಯಾವುದೊ ಎರಡು ಪುಸ್ತಕ, ಕ್ಯಾಮೆರಾ ಮತ್ತು ಕ್ಯಾಮೆರಾ ಸ್ಟ್ಯಾಂಡ್ ಹೆಗಲಿಗೆ ಸಿಗಿಸಿಕೊಂಡು ಹೊರಡುವುದಕ್ಕೆ ಸಿದ್ದನಾದೆ.
ತಕ್ಷಣಕ್ಕೆ ಹೊರಡುವುದು ಹೇಗೆ ಎಂಬ ದೊಡ್ಡ ಪ್ರಶ್ನೆ ನನ್ನ ಮುಂದೆ? ಒಂದು ಕ್ಷಣ ಗಾಬರಿಗೊಂಡೆ ಸಮಯ ಇನ್ನು ಮುಂಜಾನೆ 5.೦೦ ಗಂಟೆ, ಈ ಸಮಯಕ್ಕೆ ಯಾವ BMTC ಬಸ್ ಸಿಗುವುದಿಲ್ಲ, ಗಾಡಿಯಲ್ಲಿ ಹೋದರೆ ಅದನ್ನು ಎಲ್ಲಿ ನಿಲಿಸುವುದು? ಸರಿ ಅಪ್ಪನನು ನಿದ್ರೆಯಿಂದ ಎಚ್ಹರಿಸಿ nayandalli ಗೆ ಡ್ರಾಪ್ ಮಾಡಿಸಿಕೊಂಡೆ. ಮಗನಿಗೆ 'ಕ್ಷೇಮವಾಗಿ ಹೋಗಿ ಬಾ' ಎಂದು ಹೇಳದೆ ಗಾಡಿ ವಾಪಾಸ್ ತಿರುಗಿಸಿ ಗುರ್ರ್.... ಎಂದು ಮನೆ ಕಡೆ ಹೊರಟರು. ಆ ಸಮಯದಲ್ಲೂ ಸುಮಾರು ಜನ ಬಸ್ ಗಾಗಿ ಕಾಯುತ್ತ ಕುಳಿತಿದರು,ಒಬ್ಬೊಬ್ರು ಒಂದೊಂದು ಬಂಗಿಯಲ್ಲಿ ನಿಂತಿದರು, ಒಬ್ಬ ಆಕಾಶ ನೋಡುತ ಬೀಡಿ ಸೇದುತ್ತಿದ, ಚಿಕ್ಕ ಮಗುವೊಂದು ತನ್ನ ಅಪ್ಪನ ಕಾಲನು ತಬ್ಬಿ ನಿಂತು, ಆ ಮುಗ್ದ ಕಣ್ಣುಗಳಿಂದ ಆಗೊಂದು ಹೀಗೊಂದು ಬರುವ ಗಾಡಿಯನು ದಿಟ್ಟಿಸಿ ನೋಡುತ್ತಿತ್ತು. ಇದನೆಲ್ಲ ಗಮನಿಸುತ್ತಿದ್ದ ಹಾಗೆ ಬಸ್ ಬಂತ್ತು ನೋಡಿ! ಆ ಜನ ಸಾಗರದ ನಡುವೆ ನುಗ್ಗಿ ಸೀಟ್ ಹಿಡಿದು ಕುಳಿತೆ. ಬಸ್ ನಲ್ಲಿ ಅರ್ದದಷ್ಟು ಜನ ನಿದ್ದ್ರೆಯಲಿ ಮಗ್ನರಾಗಿದ್ದರು! 'ಯಾರ ರೀ ಟಿಕೆಟ್-ಟಿಕೆಟ್ ಹಿಂದೆ' ಎಂದು ಮಂಕೀ ಕ್ಯಾಪ್ ಹಾಕಿದ ಕಂಡಕ್ಟರ್ ಟಿಕೆಟ್ ಕೇಳಲು ಬಂದರು, 'ಮೈಸೂರಿಗೆ ಒಂದು ಟಿಕೆಟ್ ಕೊಡಿ' ಎಂದು ಹಸನ್ಮುಖಿ ಗಾಂಧೀಜಿ ಅವರ 100 ರುಪಯೀ ನೋಟು ಕೊಟ್ಟರು ಕಂಡಕ್ಟರ್ ಮುಖದ ಮೇಲೆ ಮಾತ್ರ ನಗುವಿರಲಿಲ್ಲ , 94 ರುಪಯೀ ತಗೊಂಡು 5 ರುಪಾಯಿ ಕೊಟ್ಟು 'ಒಂದು ರುಪಯೀ ಅಮೇಲ್ ತಗೋಳಿ' ಎಂದು ಮುಂದೆ ನಡೆದರೂ. ನಾನಿನ್ನು ನಿದ್ರೆ ಮಂಪರಿನಲ್ಲಿದ್ದೆ, ಇದಕ್ಕಿದ ಹಾಗೆ ತಲೆಗೆ ಹುಳು ಬಿಟ್ಟಂತೆ ಒಂದು ಪ್ರಶ್ನೆ ಮೂಡಿಬಂತು!
ಒಂದು ರುಪಾಯಿ ಚಿಲ್ರೆ ತಗೋಬೇಕ? ಅಕಸ್ಮಾತ್ ಇಳಿಯುವ ಗಡಿಬಿಡಿಯಲ್ಲಿ ಮರೆತ್ತು ಹೋದ್ರೆ? ಒಂದು ರುಪಾಯಿಲ್ಲಿ ಏನ್ ಬರುತ್ತೆ? ಕಂಡಕ್ಟರ್ ಅದರಿಂದ ಏನ್ ಮಹಾನ್ ಮಾಡಬಹುದು? ಅದೆಲ್ಲ ಹೋಗ್ಲಿ ಎಲ್ಲರ ಮುಂದೆ ಹೇಗ್ ಒಂದು ರುಪಾಯಿ ಕೇಳೋದು? ಮನಸು ಇಂತಹ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿಕೊಂಡಿತು.
ಒಂದು ರುಪಾಯಿಲ್ಲಿ ಏನ್ ತಗೋಬಹುದು? ಒಳ್ಳೆ ಚಾಕಲೇಟ್ ಬರೋಲ್ಲ, ನಮ್ಮ ಬಾಲ್ಯದಲ್ಲಿ ಒಂದು ರೂಪಾಯಿಗೆ ಏನೆಲ್ಲಾ ಬರ್ತಿತ್ತು, ಶುಂಟಿ ಪೆಪ್ಪರಮೆಂಟು , ಹಳ್ಕೊವ , ಬೋಟಿ, ಬತ್ತಾಸು, ತೆಂಗಿನ ಕಾಯಿ ಚೂರು, ಜಾಮೂನು, ನೆಲ್ಲಿಕಾಯಿ, ಮಾವಿನಕಾಯಿ, ಅಮ್ಟೆಕಾಯಿ, ಆಸೆ ಚಾಕಲೇಟ್, ಮೈಸೂರ್ ಪಾಕ್ , ಚಕ್ಕುಲಿ, ಕೋಡುಬಳೆ,ನಿಪ್ಪಟು, ಕೊಬ್ರಿ-ಮಿಠಾಯಿ, ಬಾಂಬೆ ಮಿಠಾಯಿ , ಮತಷ್ಟು ಹೆಸರು ಮರೆತ್ತ ಅನೇಕ ತಿಂಡಿಗಳು ಇವೆ. ಇದಲ್ಲದೆ ಬುಗುರಿ, ಗೋಲಿ, ಗಾಳಿಪಟ ಅಂತ ಎಷ್ಟೆಲ್ಲಾ ಸಿಗುತ್ತಿದವು.ಆದರೆ ಇಂದು ಬೆಂಗಳೂರು ನಗರ ತುಂಬ ವಿಸ್ತಾರವಾಗಿ ಬೆಳೆದು ಹೋಗಿದೆ, ಅವೆಲ್ಲ ಬರಿ ನೆನಪಿಗೆ ಉಳಿದಿರುವ ಮಾತಷ್ಟೇ. ಇನ್ನು ನಗರದ ಕೆಲವು ಬೀದಿಗಳಲ್ಲಿ ಈ ತಿಂಡಿಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ ಎಂದರೆ ಅದು ಆಶ್ಚರ್ಯದ ಸಂಗತಿಯೇ ಸರಿ.
ಅದೇ ಒಂದು ರೂಪಾಯಿಗೆ ಇವತ್ತು ಏನ್ ಬರುತ್ತೆ? taste ಇಲ್ಲದ ಒಂದು ಚಾಕಲೇಟ್, 60 ಸೆಕೆಂಡ್ ಮಾತಾಡುವಷ್ಟು coin ಬೂತ್ , ದೇಹದ ತೂಕ ತೋರಿಸುವ ಯಂತ್ರಗಳು, ಮತ್ತೇನು??. ಇದನೆಲ್ಲ ಯೋಚಿಸುವಷ್ಟರಲ್ಲಿ ಮದ್ದೂರ್ ಬಸ್ ಸ್ಟಾಪ್ ಗೆ, ಬಸ್ ಬಂದು ನಿಂತಿತ್ತು. ನಿದ್ರೆಯ ಮಂಪರು ಓಡಿಸಲು ಒಂದು ಕಪ್ ಕಾಫಿ ತರಲು ಹೋದೆ, ಸಕ್ಕರೆ ಪಾಕಕ್ಕೆ ನೊಣಗಳು ಮುತ್ತುವಂತೆ, ಜನರು ಕಾಫೀ ಮಾರುವವನ ಸುತ್ತ ನಿಂತಿದರು. ಹಾಗು ಹೀಗೂ ಮುಂದೆ ಹೋಗಿ 'ಒಂದು ಕಪ್ ಕಾಫೀ...' ಎಂದೇ , ಇವನು ಯಾವ ಊರ್ ದೊಣ್ಣೆ ನಾಯಕ ಎಂದು ಮುಖ ನೋಡದೆ, ಫ್ಲಾಸ್ಕ್ ಇಂದ ಕಪ್ ಗೆ ಕಾಫೀ ಬಗ್ಗಿಸಿ 6 ರುಪಾಯಿ ಚಿಲ್ರೆ ಕೊಡಿ ಅಂದ. ನನ್ನ ಬಳಿ ಚಿಲ್ರೆ ಇರಲಿಲ್ಲ , ತಗೋಳಿ ಚಿಲ್ರೆ ಇಲ್ಲ ಎಂದು 10 ರುಪಾಯಿ ಕೊಟ್ಟೆ, ಮಂತ್ರ ಹೇಳುವ ಪೂಜಾರಿಯಂತೆ ಅದೆನನೋ ಗೊಣಗುತ್ತ 'ತಕ್ಕೊಳಿ, ಮೂರ್ ರುಪಾಯಿ ಅದೇ, ಯಾವಾಗಾದ್ರೂ ಇತ್ತಾಗ್ ಬಂದ್ರೆ ಮರಿದೆ ಒಂದು ರುಪಾಯಿ ತಗೋಳಿ' ಎಂದು ಬೇರೆ ಅವರಿಗೆ ಕಾಫಿ ಕೊಡಲು ಶುರು ಮಾಡಿದ. ಅಲ್ಲ ಮತ್ತೆ ಇಲ್ಲಿಗೆ ನಾ ಯಾಕ ಬರ್ತೀನಿ? ಬಂದ್ರು ಆ ಒಂದು ರುಪಾಯಿ ನೆನಪ ಆಗ್ಬೇಕ್ ಅಲ್ವ? ಇದನೆಲ್ಲ ಯೋಚಿಸುತ್ತ ಯಾವುದೊ ಬಸ್ ಹತ್ತಿದೆ, ಎಲ್ಲ ಹೊಸ ಮುಖಗಳು! ಮತ್ತೆ ಕೆಳಗ್ ಇಳಿದು ನೋಡಿದರೆ ಅದು ಮಡಿಕೇರಿ ಬಸ್, 'ಮಂಕೀ ಟೋಪಿ' ಕಂಡಕ್ಟರ್ ಹುಡುಕುತ್ತ, ನಮ್ಮ ಬಸ್ ಅನ್ವೇಷಣೆ ಮಾಡಿ ಬಂದು ಕುಳಿತೆ.
ಕಾಫಿ ಮೈ ಮೇಲೆ ಪರದೆ ಹಾಕಿದಂತೆ, ಕೆನೆ ಕುಳಿತ್ತು ತನ ಸ್ವಾದಿಷ್ಟ ಕಳೆದುಕೊಳುತ್ತಿತು, ಬೇಗನೆ ಕಾಫಿ ಮುಗಿಸಿ ಆ ಒಂದು ರುಪಾಯಿ ಬಗ್ಗೆ ಯೋಚಿಸಲು ಶುರು ಮಾಡಿದೆ. ಇದು ಯೋಚಿಸ ಬೇಕಾದ ವಿಷಯವೇ ಅಲವೇ? ನನ್ನ ಹಾಗೆ ಅದೆಷ್ಟೋ ಜನ ಒಂದು ರುಪಾಯಿ 'ಯಾವ ಲೆಕ್ಕ ಬಿಡಿ' ಎಂದು ಸುಮನ್ನೇ ಹೋದವರು ಇದ್ದಾರೆ, ದಿನ ಅದೆಷ್ಟು ಒಂದು ರುಪಾಯಿ ಇವರ ಜೇಬು ತುಂಬುವುದು? ಲೇಕ ಹಾಕುವುದು ಕಷ್ಟವೇ ಸರಿ.
ದಿನ ನಿತ್ಯದ ಪ್ರಯಾಣಿಕರ ಬದುಕಿನಲ್ಲಿ ಚಿಲ್ರೆ ಗಲಾಟೆ ಇದದ್ದೆ, ಒಂದು ರುಪಯಿಗೊಸ್ಕರ ತಮ್ಮ ಜಗಳದಲ್ಲಿ ಅಪ್ಪ, ಅಮ್ಮ, ಅಕ್ಕಂದಿರನು ಕರೆಯುವ ಜಗಳಗಂಟ ಪ್ರಯಾಣಿಕರು , ಕಂಡಕ್ಟರ್ ಗಳು ಇದ್ದಾರೆ. ಮಜೆಸ್ಟಿಕ್ ಬಸ್ ಸ್ಟಾಪ್ ಅಲ್ಲಿ ದಿನ ಪ್ರಯಾಣಿಸುವವರ ಅನುಭವಗಳನು ಕೇಳಿ ಅಲೆಲ್ಲ ಇಂತಹ ಅನೇಕ ಉದಾಹರಣೆಗಳು ಸಿಗ್ಗುತವೆ. ಚಿಲ್ರೆಗೋಸ್ಕರ ಕದನ ಮಾಡುವುದರಲ್ಲಿ, auntie's ಮತ್ತು ಹುಡುಗಿಯರೇ ಜಾಸ್ತಿ ಎಂದು ಕಂಡಕ್ಟರ್ ಹೇಳುವುದುಂಟು. ಕಾಲೇಜ್ ದಿನಗಳಲ್ಲಿ ನಾನು ನನ್ನ ಗೆಳೆಯರು 410 'a' ಬಸ್ ಅಲ್ಲಿ ಕಾಲೇಜ್ ಗೆ ಹೋಗುತ್ತಿದೆವು, ನಮ್ಮ ಖಾಸ ದೋಸ್ತ್ ಶಿವಣ್ಣ ಎಂಬುವ ಕಂಡಕ್ಟರ್ ಆ ಬಸ್ ಅಲ್ಲಿ ಬರುತ್ತಿದರು, ಒಂದು ದಿನ ಅವರು ಬರದೆ ಹೋದರೆ ಅದೆಂತದೋ ಬೇಸರ, ಕಾಲೇಜ್ ಹುಡುಗರಂತೆ ನಮ್ಮೆಲರ ಜೊತೆ ಇರುತ್ತಿದರು. ಕಾಮಿಡಿ ಟೈಮ್ ಗಣೇಶನಂತೆ ಆಡುತ್ತಿದ ಇವರ ಸ್ವಭಾವ ಎಲ್ಲರಿಗು ಒಂದು ಮನೋರಂಜನೆ ಆಗಿತ್ತು. ಒಂದು ದಿನ ಶಿವಣ್ಣ ಅವರ ಜೇಬು ಹರಿದು ಹೋಗಿತ್ತು, ಕೂದಲೆಲ್ಲ ಕೆದರಿ ಕಣ್ಣು ಕೆಂಪಾಗಿದ್ದುವು, "ಏನ್ ಅಂಕಲ್ ಮನೆಯಲ್ಲಿ ಹೆಂಡ್ತಿ ಹತ್ರ ಜಗಳ ಮಾಡ್ಕೊಂಡ್ ಬಂದ್ರ" ಎಂದು ಪ್ರಶ್ನೆ ಕೇಳಿ ಮುಗುಳ ನಕ್ಕೆ, ಕೋಪ ಮಾಡಿಕೊಳ್ಳದೆ ಶಾಂತ ಸ್ವಭಾವದಿಂದ, "ಇಲ್ಲಯ್ಯ, ವಿಜಯನಗರ ಬಸ್ ಸ್ಟಾಪ್ ಅಲ್ಲಿ ದಡುತಿ ದೇಹದ ಹೆಂಗಸು ಮಡಿದ ಕೆಲಸ ಇದು, ಚಿಲ್ರೆ ಕೇಳಿದ್ರು ಇಲ್ಲ ಸಂಜೆ ಬನ್ನಿ ಒಟ್ಟಿಗೆ ಕೊಡ್ತೀನಿ ಅಂತ ಸ್ವಾಭಾವಿಕವಾಗಿ ಹೇಳದೆ ಅದಕ್ಕೆ ಅವಳು ತಪ್ಪು ತಿಳಿದು , ಬೇರೆ ಯಾವುದಕ್ಕೋ ಕರದೇ ಅಂತ ಹಿಂಗೆ ಚಪಾತಿ ತಟ್ಟಿದಳು. ಎಲ್ರು ಗಲಾಟೆ ಬಿಡ್ಸಿ ಆ ಮೂದೇವಿಗೆ ಬುದ್ದಿ ಹೇಳಿದ್ ಮೇಲೆ 'ಸಾರಿ, ಬೇಜಾರ್ ಮಾಡ್ಕೋ ಬೇಡಿ, ತಪ್ಪಾಯ್ತು ಹೊಟ್ಟೆಗ್ ಹಾಕೋ ಬಿಡಿ' ಅಂತ ಪೇಸ್ damage ಮಾಡಿ ಹೋದಳು. ಅಲ್ಲ ಏನ್ ಆಯ್ತು ಅಂತ confusion ಅಲ್ಲಿ ಗೊತ್ತಾಗದೆ ನನ್ನಿಗೆ ಒಂದು ಪ್ರಶ್ನೆ ನೆನಪಯ್ತ್ತು, ಹೀಗೂ ಉಂಟೆ!"
ದಿನ ಪೂರ್ತಿ ಅವರ ಆ ಪಜೀತಿ ನೆನಪಿಸಿಕೊಂಡು ನಗುತಿದೆವು. ಹೀಗೆ ಅದೆಷ್ಟೋ ಚಿಲ್ರೆ ಜಗಳ ಬೆಂಗಳೂರು ನಗರದಲ್ಲಿ ದಿನ ನಿತ್ಯ ಕಂಡು ಬರುತ್ತದೆ. ಇದು ಬರಿ ಪ್ರಯಾಣಿಕರಿಗೆ ಅಷ್ಟೇ ಸೀಮಿತವಲ್ಲ ತರಕಾರಿ ಮಾರುವವ, ಅಂಗಡಿಯವರು, ಪೇಪರ್-ಹಾಲು ಮಾರುವವರು, ಹೋಟೆಲ್ ಮತ್ತು ಉಳಿದವರ ದಿನ ನಿತ್ಯದ ಚಿಲ್ರೆ ಪಜೀತಿ. ಮೈಸೂರ್ ಬಸ್ ಸ್ಟಾಪ್ ಹತ್ತಿರ ಬರುತಿತ್ತು, ಬಸ್ ಸ್ಟಾಪ್ ಮುಂಚಿತವಾಗಿಯೇ ಇಲ್ಲಿದುಕೊಳಲು ಮುಂದೆ ಹೋದೆ. ಒಂದು ಕಡೆ ಚಿಲ್ರೆ ಕೇಳುವ ಮನಸು ಇನ್ನೊಂದು ಕಡೆ ಹೋಗ್ಲಿ ಬಿಡು ಯಾರ ಕೇಳ್ತಾರೆ ಅನ್ನೋ ಸೋಂಬೇರಿತನ. ಬೇಡ ಬಿಡು ಎಂದು ಮತ್ತಷ್ಟು ಮುಂದೆ ಹೋಗಿ ನಿಂತೇ , ಕಂಡಕ್ಟರ್ ಕರೆದು "ಚಿಲ್ರೆ ತಗೊಳ್ರಿ" ಎಂದರು. ಆಶ್ಚರ್ಯ! ನನ್ನ ಇಷ್ಟು ದಿನದ ಬಸ್ ಪ್ರಯಾಣದಲ್ಲಿ ಇಂತಹ ವ್ಯಕ್ತಿತ್ವವನ್ನು ನೋಡಿರಲಿಲ್ಲ, ಒಂದು ರುಪಾಯಿ ಚಿಲ್ರೆ ತಗೊಂಡು ಮುಗುಳ ನಕ್ಕಿ ಕೆಳಗೆ ಇಳಿದೆ. ಪರವಾಗಿಲ್ಲ ಒಳ್ಳೆ ಕಂಡಕ್ಟರ್ ಕೂಡ ನಮ್ಮ ಸುತ್ತ-ಮತ್ತ ಇದಾರೆ ಎಂದು ಹೆಮ್ಮೆ ಪಡುತ್ತ, ಕೆಲಸದ ಹಾದಿ ಹಿಡಿದ್ದು ಚಿಲ್ರೆ ಕಥೆಗೆ ಒಂದು ಪೂರ್ಣ ವಿರಾಮವಿಟ್ಟೆ.
ದಿನ ಪೂರ್ತಿ ಅವರ ಆ ಪಜೀತಿ ನೆನಪಿಸಿಕೊಂಡು ನಗುತಿದೆವು. ಹೀಗೆ ಅದೆಷ್ಟೋ ಚಿಲ್ರೆ ಜಗಳ ಬೆಂಗಳೂರು ನಗರದಲ್ಲಿ ದಿನ ನಿತ್ಯ ಕಂಡು ಬರುತ್ತದೆ. ಇದು ಬರಿ ಪ್ರಯಾಣಿಕರಿಗೆ ಅಷ್ಟೇ ಸೀಮಿತವಲ್ಲ ತರಕಾರಿ ಮಾರುವವ, ಅಂಗಡಿಯವರು, ಪೇಪರ್-ಹಾಲು ಮಾರುವವರು, ಹೋಟೆಲ್ ಮತ್ತು ಉಳಿದವರ ದಿನ ನಿತ್ಯದ ಚಿಲ್ರೆ ಪಜೀತಿ. ಮೈಸೂರ್ ಬಸ್ ಸ್ಟಾಪ್ ಹತ್ತಿರ ಬರುತಿತ್ತು, ಬಸ್ ಸ್ಟಾಪ್ ಮುಂಚಿತವಾಗಿಯೇ ಇಲ್ಲಿದುಕೊಳಲು ಮುಂದೆ ಹೋದೆ. ಒಂದು ಕಡೆ ಚಿಲ್ರೆ ಕೇಳುವ ಮನಸು ಇನ್ನೊಂದು ಕಡೆ ಹೋಗ್ಲಿ ಬಿಡು ಯಾರ ಕೇಳ್ತಾರೆ ಅನ್ನೋ ಸೋಂಬೇರಿತನ. ಬೇಡ ಬಿಡು ಎಂದು ಮತ್ತಷ್ಟು ಮುಂದೆ ಹೋಗಿ ನಿಂತೇ , ಕಂಡಕ್ಟರ್ ಕರೆದು "ಚಿಲ್ರೆ ತಗೊಳ್ರಿ" ಎಂದರು. ಆಶ್ಚರ್ಯ! ನನ್ನ ಇಷ್ಟು ದಿನದ ಬಸ್ ಪ್ರಯಾಣದಲ್ಲಿ ಇಂತಹ ವ್ಯಕ್ತಿತ್ವವನ್ನು ನೋಡಿರಲಿಲ್ಲ, ಒಂದು ರುಪಾಯಿ ಚಿಲ್ರೆ ತಗೊಂಡು ಮುಗುಳ ನಕ್ಕಿ ಕೆಳಗೆ ಇಳಿದೆ. ಪರವಾಗಿಲ್ಲ ಒಳ್ಳೆ ಕಂಡಕ್ಟರ್ ಕೂಡ ನಮ್ಮ ಸುತ್ತ-ಮತ್ತ ಇದಾರೆ ಎಂದು ಹೆಮ್ಮೆ ಪಡುತ್ತ, ಕೆಲಸದ ಹಾದಿ ಹಿಡಿದ್ದು ಚಿಲ್ರೆ ಕಥೆಗೆ ಒಂದು ಪೂರ್ಣ ವಿರಾಮವಿಟ್ಟೆ.
-ಇಂತಿ ಚಿಲ್ರೆ ಕೇಳದ,
ನಾನ್ಯಾರೋ..