Tuesday, April 26, 2011

ಕಿಟಕಿ



ಮಳೆ ಬಂದಾಗಲೆಲ್ಲಾ ಹೊರಗಿನ ಸುಂದರ ಪ್ರಪಂಚ ತೋರುತಿದ ಮಾಯಾ ಕಿಟಕಿ ನನ್ನ ಕೋಣೆಯದು. ಅನಂತ ಕಾಲದಲ್ಲು ನಿರಂತರವಾಗಿ ನಿಂತಲೇ ನಿಂತು ಜಡವಾಗಿ ಹೋದ ಕಿಟಕಿ ನನ್ನ ಕೋಣೆಯದು, ಮಳೆಯಾಗಲಿ, ಬಿಸಿಲಾಗಲಿ, ಚಳಿಯಾಗಲಿ, ಮೌನ ಮುರಿದು ನಿಂತಿರಲಿ ಅದೇನೇ ಆದರು ಕುಳಿತಲ್ಲೇ ಪ್ರಪಂಚ ತೋರುವ ಕಿಟಕಿ ನನ್ನ ಕೋಣೆಯದು.

ಒಂಟಿಯಾಗಿ ಅಕ್ಷರ ಗೀಚುವಾಗ, ರೇಖೆ ಎಳೆದು ಚಿತ್ರ ಬಿಡಿಸುವಾಗ, ಕ್ಷಣ ಕಾಲ ತನ್ನ ಕಡೆ ಸೆಳೆದುಕೊಂಡು " ಲೋ ಹುಡುಗ ಹೊರಗಿನ ಪ್ರೆಪಂಚದ ಕಡೆ ನೋಡು " ಎಂದು ಸೂಚಿಸುವ ಮಾಯಾ ಕಿಟಕಿ ನನ್ನ ಕೋಣೆಯದು. "ಮಳೆ-ಬಿಸಿಲಿಗೆ, ಗಾಳಿ-ಧೂಳಿಗೆ ಸಿಲುಕಿ ನೋಡು ನಾನಿನ್ನೂ ಸತ್ತಿಲ್ಲ", ದಿನ ದಿನವು ಹಾಗೆ ನಿಂತಿರುವೆ ಎಂದು ಪಾಠ ಹೇಳಿದ ಗುರು ನನ್ನ ಕೋಣೆಯ ಕಿಟಕಿ.

ನೋಡಲಿ ಅವರು, ನೋಡಿಲಿ ಇವರು, ನೋಡಲಿ ಮತ್ ಹಲವರು ಅದರಲ್ಲಿ ನಿನ್ನವರು ಎಲ್ಲಿ ಇರುವರು ಎಂದು ವಿಚಿತ್ರ ನುಡಿಗಳನು ಪಿಸುಗುಡುತಿದ ಮಾಯಾ ಕಿಟಕಿ ನನ್ನ ಕೋಣೆಯದು. ನೋಡಲಿ ಆ ಹಕ್ಕಿ ನೋಡಲಿ ಆ ಹುಳುವು, ನೋಡಲಿ ಚಂದಿರಾ, ನೋಡಲಿ ಚುಕ್ಕಿಗಳು ನೋಡಲಿ ನೀಲಿ ಅಂತರಂಗ ಆಸೆಗಳ ಆಗಸ ಎಂದು ಪ್ರಪಂಚ ತೋರಿದ ಕಿಟಕಿ ನನ್ನ ಕೋಣೆಯದು.

ಇಂತಹ ಕಿಟಿಕಿಯ ಸನಿಹದಲ್ಲಿ ಕುಳಿತು ಅಕ್ಷರ ಗೀಚುತು ನೆನಪುಗಳ ಸಾಲಲಿ ಮರೆಯಗುತಿರುವ,

ಇಂತಿ ಕಿಟಕಿ ಚೋರ,
ನಾನ್ಯಾರೋ

Monday, April 18, 2011

ಮಳೆ ಚೆಲ್ಲಿ ಮರೆಯಾದವಳು




ಅವಳಿಗಾಗಿ ನಾ ಕಾದು ಕುಳಿತಿದ್ದೆ, ಅವಳು ಬಾರದೆ ಎಲ್ಲೋ ಅಲೆಯುತ್ತಿದಳು, ಅದು ಯಾರು ಎಂದು ಗೊತ್ತೇ??? ಅವಳೇ ಮೋಡ ಮುಸುಕಿದ ಆಗಸ, ನನ್ನ ಪ್ರೀತಿಯ ಮೇಘ. 

            ಅವಳ ಬರುವಿಕೆಯ ನಿರೀಕ್ಷೆಯಲ್ಲಿ ಕಾದು ಕುಳಿತ ನನಗೆ, ಏನು ಮಾಡಬೇಕು ಎಂದು ತೋಚದೆ, ಆಗಸದ 
ಕಡೆ ದಿಟ್ಟಿಸುತ್ತಾ ನೋಡುವಾಗಲೇ ಅವಳು, ತುಂತುರು ಮಳೆಯಾಗಿ ಬಂದು ಬಿಗಿದಪ್ಪಿದಳು. ತಡವಾಗಿ ಬಂದ ಕಾರಣ ನನ್ನ ಹುಸಿ ಮುನಿಸು ಅವಳಿಗೆ ತಿಳಿಯಲೆಂದು ತುಸು ದೂರ ನಡೆದೆ, ತಂಗಾಳಿಯಲ್ಲಿ ತೇಲಿ ಬಂದು ನನ್ನ ಸುತ್ತ ಅವರಿಸಿದಳು. ಮತ್ತೆ  ಮುನಿಸಿಕೊಂಡು ಮತ್ತಷ್ಟು  ದೂರ ಸರಿದೆ. ನನ್ನೀ ವಿಚಿತ್ರ ನಡವಳಿಕೆ  ಕಂಡು ಅವಳ ಕಣ್ಣು ತುಂಬಿ ಬಂತು. ತಡ ಮಾಡದೆ ಅವಳ ಬಳಿಗೆ ಓಡಿ ಹೋಗಿ, ಅವಳ ಬಿಗಿದಪ್ಪಿದೆ. ಅವಳಿಗೂ ಬಹು ದಿನದ ಕೋಪ ಇದ್ದ  ಹಾಗಿತ್ತು, ಅವಳು ಮಾತನಾಡದೆ ಮುನಿಸಿಕೊಂಡು ಗುಡುಗಿದಳು. ಪ್ರೀತಿ ಇಂದ ಅವಳಿಗಾಗಿ ಅಕ್ಷರ ಕೂಡಿಸಿ ಬರೆದ ಕವಿತೆಯ ಓದಿದೆ. ನಾಚಿ ಇಬ್ಬನಿಯ ನೀರಂತೆ ಕರಗಿ ಹೋಗಿ ತುಟಿಯಂಚಲಿ ಕಿರು ನಗೆಯ ಮಿಂಚಿಸಿದಳು.

        ನಮ್ಮೀ ಪ್ರೀತಿಯ ಸೆಣೆಸಾಟ ಕಂಡು ತಬ್ಬಿಬ್ಬಾದ ಅಳಿಲು ಮರಿ, ಮಂಕಾಗಿ ಮರ ತಬ್ಬಿ ನಿಂತಿತು, ನೀಲಿ ಪ್ರಪಂಚದ ಒಡೆಯರಾದ ಪಕ್ಷಿಗಳು, ಮಳೆಯ ಆರ್ಭಟಕ್ಕೆ ಕೊಂಬೆಗಳ ಮೇಲೆ ಕುಳಿತು ರೆಕ್ಕೆ ಒದರುತ್ತ , ಕ್ಷೀಣ ದನಿಯಲ್ಲಿ ನಿಟ್ಟುಸಿರು ಬಿಟ್ಟವು. ಇಷ್ಟೆಲ್ಲಾ ನಡೆಯುತ್ತಿದರು, ಉದ್ದ ಕೊಕ್ಕಿನ ಕಾಗೆ ಮಾತ್ರ ಅಲ್ಯಾರೋ ಚೆಲ್ಲಿದ ತಿಂಡಿ ತಿನ್ನಲು ಸರ್ಕಸ್ ಮಾಡುತಿತ್ತು. ಕೊಕ್ಕು ಕೊಂಚ ಉದ್ದವಿದ್ಧ ಕಾರಣ, ನೆಲದ ಮೇಲೆ ಬಿದ್ದ ಆಹಾರ ಹೆಕ್ಕಲು ತೊಡಗಿತ್ತು . ಪುಟ್ಟ ನಾಯಿ ಮರಿಯೊಂದು ಲೈಟ್ ಕಂಬದ ಕೆಳಗೆ ತನ್ನ ಬಾಲ ಹಿಡಿದು ಆಟವಾಡುತ್ತ, ನೆಲದ ಮೇಲೆ ನಿಂತ ಮಳೆ ನೀರಲ್ಲಿ ದೊಪ್ಪನೆ ಬಿತ್ತು, ಎದ್ದು ಒಂದಷ್ಟು ದೂರ ಓಡಿ ಮತ್ತೆ  ನೀರಿನ ಜಾಗಕೆ ಬಂದು ಅದರ ಪ್ರತಿಬಿಂಬ ಕಂಡು ಬೌ.. ವೌ.. ಎಂದು ಕೂಗಿ ಸುಸ್ತಾಗಿ ಕುಳಿತಿತ್ತು.  

  ನನ್ನವಳ ಕೈ ಹಿಡಿದು ಪಾರ್ಕಿನ ಸುತ್ತ ಸುತ್ತಿದೆ, ಅಲ್ಲಿದ್ದ  ಬಂಡೆ ಮರಗಳು ನಮ್ಮದೇ ಎನ್ನುವ ಹಾಗಿತ್ತು, ನಮ್ಮ ಪ್ರಪಂಚ ಮರೆತು  ನಾವಿಬ್ಬರು ಕಣ್ಣಿನ ವಿಚಿತ್ರ ಮೂಕ ಬಾಷೆಯಲ್ಲಿ ಒಂದಾದೆವು. ಆಗಸದ ತುದಿ ಇಂದ ಜಾರಿದ ಮುತ್ತಿನ ಹನಿ ಅವಳ ತುಟಿ ಮೇಲೆ ಸ್ಥಾನ ಪಡೆಯಿತು, ನೊಡುತ್ತಿದ್ದ ಹಾಗೆಯೇ ಅದು ನನ್ನ ತುಟಿಯ ಪಾಲಾಯಿತು. ಮೋಡಗಳ ಹಿಂದೆ ನಿದ್ರಿಸುತ್ತಿದ್ದ ಸೂರ್ಯ ದೇವ ಮೆಲ್ಲಗೆ ಮುಗುಳು ನಕ್ಕ, ಅವನ ನಗುವಿಗೆ ಜೇಡರ ಬಲೆಯ ಮೇಲ್ಲಿಂದ ಮಳೆ ಹನಿಗಳು ಮುತ್ತಿನ ಹಾರದಂತೆ ಕಂಡವು, ಅದನ್ನು  ನನ್ನವಳ ರೂಪಕ್ಕೆ ಅರ್ಪಿಸಬೇಕೆಂಬ ಹಂಬಲವಾಯಿತು .

ನಾಳೆಯ ನೂರು ಕನಸು ಹೊತ್ತು ನಡೆಯುತಿದ್ದ ನಮ್ಮ  ಕಾಲು, ಬಟ್ಟೆ, ಚಪ್ಪಲಿ, ಒದ್ದೆಯಾಗಿ ಮಣ್ಣಿನ ಬದಿಯಾಗಿತ್ತು. ಸೂರ್ಯ ದೇವ ಮೆಲ್ಲನೆ ಭೂ ತಾಯಿಯ ಮಡಿಲಿಗೆ ಜಾರ ತೊಡಗಿದ, ಕರೆಂಟ್ ಇದಕ್ಕಿದ ಹಾಗೆ ಮಾಯವಾಯಿತು, ಮೂಲೆಯ ಕುರ್ಚಿ ಒಂದರಲ್ಲಿ ಕುಳಿತು ನಮ್ಮಿಬರ ಮುಂದಿನ ದಿನಗಳ ಬಗ್ಗೆ ಮಾತಾಡುತ್ತಿದ್ದೆ   , ಬೆಳಕು ಕ್ಷೀಣಿಸಿದಂತೆ ಅವಳು ದೂರವಾಗಿ ಹೋದಳು, ಮತ್ತೊಮ್ಮೆ ಬಂದು ಬಿಗಿದಪ್ಪಬಾರದೆ ಗೆಳತಿ ಎಂದು ಪಾರ್ಕಿನ ಬೆಂಚ್ ಮೇಲೆ ಅವಳ ನೆನೆಯುತ್ತ, ಕತ್ತಲೆಯ ಗುಪ್ತ ಧ್ವನಿಯಲ್ಲಿ  ಮೂಕನಾದೆ, ಸಾವಿನ ಮೌನದಂತೆ ಆವರಿಸಿದ ಮೌನವ ಕಂಡು ದಿಗ್ಬ್ರಮೆಯಾಗಿ ಕುಳಿತೆ.

ದೂರದ ಬಂಡೆಯ ಮೇಲೆ ಕುಳಿತ ತಾತಯ್ಯ, ಕತ್ತಲಿನ ನೀರವ ಮಬ್ಬಿನಲ್ಲಿ , ಭಂಗಿ ಸೇದುವಾಗ ಅದರ ಬೆಳಕಿನಲ್ಲಿ ಒಮ್ಮೊಮ್ಮೆ  ಕಾಣುತ್ತಿದ್ದ , ಬಹುಷ್ಯ ಅವನ ಅರ್ಧಾಂಗಿಯ ನೆನಪ್ಪೆಂದು ಕಾಣುತ್ತದೆ ಏಕೆಂದರೆ ಅವನ ಭಂಗಿಯ ಹೊಗೆಯು, ಅವನ ಸುತ್ತ ಅವರಿಸುತ್ತ ಒಂದು ಹೆಣ್ಣಿನ ಚಿತ್ರ ಮೂಡಿ ಬಂದಂತ್ತಿತ್ತು.

           ನಾನು ಮಂತ್ರ ಮಗ್ಧನಾಗಿ ಮಳೆ ಚೆಲ್ಲಿ ಮರೆಯಾದವಳ ನೆನಪಿನಲ್ಲಿ  ಲೀನವಾಗಿ ಕುಳಿತೆ!


                                                                        - ಇಂತಿ ನೆನಪುಗಳ ಪುಟಗಳಲ್ಲಿ   
                                                                                  ನಾನ್ಯಾರೋ